ಸಹೃದಯಿ ಗೆಳೆಯರು ತಂಡದಿಂದ ನೆರವು ಹಸ್ತಾಂತರ

Mul_Helping
Published on

ಹಳೆಯಂಗಡಿ: ಪಡುಪಣಂಬೂರಿನ ಸಹೃದಯಿ ಗೆಳೆಯರು ತಂಡ ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವದಲ್ಲಿ ವಿಭಿನ್ನ ವೇಷ ಧರಿಸಿ ಅಶಕ್ತರಿಗೆ ನೆರವಾಗಿದ್ದಾರೆ.

ಗ್ರಾಪಂ ಸದಸ್ಯ ದಿನೇಶ್ ಶೆಟ್ಟಿ ಹೊಸಲಕ್ಕೆ ನೇತೃತ್ವದಲ್ಲಿ ಗೆಳೆಯರ ತಂಡ ವಿಭಿನ್ನ ವೇಷ ಧರಿಸಿ ಸಾರ್ವಜನಿಕರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ಹಣವನ್ನು ಹಳೆಯಂಗಡಿ ಜಾರಂದಾಯ ದೈವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಡ್ವೆಯ ಶ್ರದ್ಧಾ- ಸುನೀಲ್ ದಂಪತಿ ಮಗುವಿನ ಚಿಕಿತ್ಸೆಗೆ 1,59,021 ರೂ. ಮತ್ತು ಸವಿತಾ ಲಿಂಗಪ್ಪಯ್ಯಕಾಡು ಅವರ ಚಿಕಿತ್ಸೆಗೆ 25,021 ರೂ. ಹಸ್ತಾಂತರಿಸಲಾಯಿತು.

ಹೊಯ್ಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ರಾಮ್ ಭಟ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಪೂಜಾರಿ, ಮೂಲ್ಕಿ ವಿಜಯ ರೈತರ ಸೇವಾ ಸಂಘದ ಅಧ್ಯಕ್ಷ ರಂಗನಾಥ್ ಶೆಟ್ಟಿ, ಉದ್ಯಮಿ ನವೀನ್ ಶೆಟ್ಟಿ ಮೂಲ್ಕಿ, ಗೆಳೆಯರ ಬಳಗ ಸುರತ್ಕಲ್‌ನ ಅಧ್ಯಕ್ಷರಾದ ನಾಗೇಶ್ ಪೂಜಾರಿ, ಸುಭಾಷ್ ಕಾಮತ್ ಮೂಲ್ಕಿ, ಪ್ರಭಾಕರ ದೇವಾಡಿಗ ಮೂಲ್ಕಿ, ಪ್ರವೀಣ್ ಕೊಲ್ಲೂರು, ರಾಜೇಂದ್ರ ಜೈನ್, ಚಂದ್ರನಾಥ್ ಜೈನ್, ಮೋಹನ್ ಕುಂದರ್, ವಿನಯ್ ಕಾಂಚನ್, ವರದ್ ಕಾಂಚನ್, ರಾಜೇಶ್ ಶೆಟ್ಟಿಗಾರ್, ರಮೇಶ್ ದೇವಾಡಿಗ, ದೀಪಕ್ ಬಂಗೇರ ಮತ್ತು ಶ್ರೀ ಭಗವತಿ ಯುನೈಟೆಡ್ ಫ್ರೆಂಡ್ಸ್ ಕದಿಕೆಯ ಸದಸ್ಯರು, ಸಹೃದಯಿ ಗೆಳೆಯರು ಪಡುಪಣಂಬೂರು ತಂಡದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net