

ಮಂಗಳೂರು: ಇಲ್ಲಿನ ಕುಲಶೇಖರದ ದರ್ಶನ್ ಡಿ. ಕೋಟ್ಯಾನ್ ಅವರು ಭಾರತೀಯ ಸೇನೆಯ ಶಸ್ತ್ರಸಜ್ಜಿತ ವಿಭಾಗದಲ್ಲಿ (ಆರ್ಮ್ಡ್ ರೆಜಿಮೆಂಟ್) ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
ದರ್ಶನ್ ಡಿ. ಅವರು ಚೆನ್ನೈಯ ಅಫೀಸರ್ಸ್ ಟ್ರೈನಿಂಗ್ ಅಕಾಡಮಿಯಲ್ಲಿ ತರಬೇತಿ ಮುಗಿಸಿ ಲಿಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ.ಇ ಯಲ್ಲಿ ಪ್ರಾಥಮಿಕ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ್ದ ಅವರು ಸೈಟ್ ಜೋಸೆಫ್ ಇಂಜಿನಿಯರಿಂಗ್ ಕಾಲೆಜು ವಾಮಂಜೂರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದಿದ್ದಾರೆ.
ಇವರು ಕುಲಶೇಖರದ ನಿವಾಸಿ ದಯಾನಂದ ಕೋಟ್ಯಾನ್ ಹಾಗೂ ಯಶಪ್ರಭಾ ದಂಪತಿ ಪುತ್ರ.