ಹೆಬ್ರಿ: ಸರ್ಕಾರದಿಂದ ಸಿಗುವ ಅನುದಾನವನ್ನು ಸ್ವಸಹಾಯ ಸಂಘಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಆರ್ಥಿಕ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಿಕೊಂಡು ಸದಸ್ಯರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಉಡುಪಿ ಜಿಪಂ ಉಪ ಕಾರ್ಯದರ್ಶಿ ನಾಗರಾಜ ನಾಯಕ ಹೇಳಿದರು.
ಹೆಬ್ರಿಯಲ್ಲಿ ತಾಪಂ ವತಿಯಿಂದ ಬುಧವಾರ ಜಮಾಬಂದಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಒ ಶಶಿಧರ್ ಕೆ.ಜೆ., ಟಿ.ಪಿ.ಒ ಮಹೇಶ್, ಪಿಡಿಒಗಳು, ಕಾರ್ಯದರ್ಶಿಗಳು, ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಟಿಪಿಒ ಮಹೇಶ್ ಸ್ವಾಗತಿಸಿದರು.