ಬೈಂದೂರು: ಗಂಗೊಳ್ಳಿ ರೋಟರಿ ಕ್ಲಬ್ ಆತಿಥ್ಯದಲ್ಲಿ ತಾಲೂಕಿನ ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗಮಂಟಪದಲ್ಲಿ ನಡೆದ ರೋಟರಿ ವಲಯ-1ರ ವಲಯ ಮಟ್ಟದ ಸಾಂಸ್ಕೃತಿಕ ಉತ್ಸವ 2024 ಗಂಗಾತರಂಗದ ವಿವಿಧ ಸ್ಪರ್ಧೆಗಳಲ್ಲಿ ಬೈಂದೂರು ರೋಟರಿ ಕ್ಲಬ್ ತಂಡ ವಲಯ ಬಹುಮಾನಗಳಿಸಿ ಚಾಂಪಿಯನ್ ಸ್ಥಾನ ಪಡೆಯಿತು.
ಭಾವಗೀತೆಯಲ್ಲಿ ಪೂರ್ಣಿಮಾ ವಿಷ್ಣು ಪೈ ಪ್ರಥಮ, ಚಿತ್ರಗೀತೆಯಲ್ಲಿ ಜತೀಂದ್ರ ಮರವಂತೆ ತೃತೀಯ, ಯುಗಳ ಗೀತೆಯಲ್ಲಿ ಪೂರ್ಣಿಮಾ ವಿಷ್ಣು ಪೈ ಹಾಗೂ ರಾಘವೇಂದ್ರ ಪ್ರಥಮ, ಏಕಪಾತ್ರಾಭಿನಯದಲ್ಲಿ ನಾಗೇಂದ್ರ ಬಂಕೇಶ್ವರ ತೃತೀಯ, ಏಕವ್ಯಕ್ತಿ ನೃತ್ಯದಲ್ಲಿ ನಿಧಿ ನಾಗೇಂದ್ರ ದ್ವಿತೀಯ, ಗುಂಪು ನೃತ್ಯದಲ್ಲಿ ಪ್ರಥಮ, ಪ್ರಹಸನದಲ್ಲಿ ತೃತೀಯ, ಚಿತ್ರಕಲೆಯಲ್ಲಿ ಸ್ಕಂದರಾಮ್ ಪ್ರಥಮ ಬಹುಮಾನ ಪಡೆದು ಒಟ್ಟು ಎಂಟು ಸ್ಪರ್ಧೆಗಳಲ್ಲಿ ಹೆಚ್ಚು ಅಂಕ ಪಡೆದು ಬೈಂದೂರು ಕ್ಲಬ್ ಚಾಂಪಿಯನ್ ಪಟ್ಟಗಳಿಸಿಕೊಂಡಿತು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆನಂದ್ ಸಿ.ಕುಂದರ್, ರೋಟರಿ ಜಿಲ್ಲಾ ಗವರ್ನರ್ ಸಿಎ ದೇವ್‌ಆನಂದ್ ಬಹುಮಾನ ವಿತರಿಸಿದರು. ಸಹಾಯಕ ಗವರ್ನರ್ ಡಾ.ಬಿ.ರಾಜೇಂದ್ರ ಶೆಟ್ಟಿ, ರೋಟರಿ ಜಿಲ್ಲಾ ಸಾಂಸ್ಕೃತಿಕ ಸಂಯೋಜಕ ಜಯಪ್ರಕಾಶ್ ಶೆಟ್ಟಿ, ಗಂಗಾತರಂಗ ಅಧ್ಯಕ್ಷ ಉಮೇಶ್ ಮೇಸ್ತ, ಸಿಎ ರೇಖಾ ದೇವ್‌ಆನಂದ್, ವಲಯ 1ರ ಸಾಂಸ್ಕೃತಿಕ ಸಂಯೋಜಕ ಶಶಿಧರ ಶೆಟ್ಟಿ, ವಲಯ ಸೇನಾನಿಗಳಾದ ಪ್ರದೀಪ್ ಡಿ.ಕೆ., ವೆಂಕಟೇಶ್ ನಾವುಂದ, ಮಹೇಂದ್ರ ಶೆಟ್ಟಿ, ಗಂಗೊಳ್ಳಿ ರೋಟರಿ ಕಾರ್ಯದರ್ಶಿ ಮಾಲಾಶ್ರೀ, ಬೈಂದೂರು ರೋಟರಿ ಅಧ್ಯಕ್ಷ ಮೋಹನ್ ರೇವಣ್ಕರ್, ಪೂರ್ವಾಧ್ಯಕ್ಷರಾದ ಐ.ನಾರಾಯಣ್, ಶಿರೂರು ಪ್ರಸಾದ್ ಪ್ರಭು, ಉದಯ ಆಚಾರ್, ಡಾ.ಪ್ರವೀಣ್ ಶೆಟ್ಟಿ, ಸುಧಾಕರ ಪಿ., ಮಂಜುನಾಥ ಮಹಾಲೆ, ಶಾರದಾ ನಾರಾಯಣ, ಕಾರ್ಯದರ್ಶಿ ಸುನೀಲ್ ಎಚ್.ಜಿ., ಬೈಂದೂರು ಕ್ಲಬ್‌ನ ಸ್ಪರ್ಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.