ಆರ್ಡಿ: ಬಾಲ ಗೋಕುಲಗಳಿಂದ ಮಕ್ಕಳು ಸಂಸ್ಕಾರದ ಜತೆಗೆ ಹಿಂದು ಧರ್ಮದ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಗ್ರಾಮ ವಿಕಾಸ ಗತಿವಿಧಿ ಮಂಗಳೂರು ವಿಭಾಗ ಟೋಳಿ ಸದಸ್ಯೆ ರಮಿತಾ ಶೈಲೇಂದ್ರ ಹೇಳಿದರು.
ಕುದ್ರುಬೀಡು ಕೊಳ್ಕೆಬೈಲು ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಉಡುಪಿ ಜಿಲ್ಲಾ ಗ್ರಾಮ ವಿಕಾಸ ಮಡಾಮಕ್ಕಿ ಬೆಪ್ಡೆ ವತಿಯಿಂದ ಅಹಲ್ಯಾ ಬಾಯಿ ಹೋಲ್ಕರ್ 300ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.
ಉಡುಪಿ ಜಿಲ್ಲಾ ವಿಶ್ವ ಹಿಂದು ಉಪಾಧ್ಯಕ್ಷ ವೈ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಕುದ್ರುಬೀಡು ಕೊಳ್ಕೆಬೈಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಅರ್ಚಕ ಮಹಾಬಲೇಶ್ ಭಟ್, ಆರ್.ಎಸ್.ಎಸ್ ಕಾರ್ಯಕರ್ತ ಗಣೇಶ್ ಅರಸಮ್ಮಕಾನು, ಹೆಬ್ರಿ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಗೋಪಾಲ್ ಕುಲಾಲ, ಬೆಪ್ಡೆ ಶ್ರೀಉಮಾಮಹೇಶ್ವರ ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಉಡುಪಿ ಜಿಲ್ಲಾ ಗ್ರಾಮ ವಿಕಾಸ ಹೆಬ್ರಿ ವಲಯ ಮಹಿಳಾ ಕಾರ್ಯದ ಸಹ ಸಂಯೋಜಕಿ ಉಷಾ ಶೆಟ್ಟಿ, ವಿವಿಧ ಭಜನಾ ಮಂಡಳಿಯವರು, ಬಾಲ ಗೋಕುಲದ ಮಕ್ಕಳು, ಪಾಲಕರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಭಾರತಾಂಭೆಯ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪಂಚಾಂಗ ಓದಿ, ದೇಶ ಭಕ್ತಿ ಗೀತೆ ಹಾಡಿದರು. ಉಷಾ ಶೆಟ್ಟಿ ಸ್ವಾಗತಿಸಿ, ಗಣೇಶ್ ಅರಸಮ್ಮಕಾನು ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಅಶ್ವಿತಾ ಶೆಟ್ಟಿ ವಂದಿಸಿದರು.