ವಿಜಯವಾಣಿ ಸುದ್ದಿಜಾಲ ಬೈಂದೂರು
ಉಪ್ಪುಂದ ಅಮ್ಮನವರ ದೇವಸ್ಥಾನ ಕೊಲ್ಲೂರು ದೇವಸ್ಥಾನದಷ್ಟೆ ಪ್ರಾಮುಖ್ಯತೆ ಹೊಂದಿದೆ. 35 ವರ್ಷಗಳ ಬಳಿಕ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ ಕೋಟೇಶ್ವರ ಹಬ್ಬಕ್ಕಿಂತ ಮೊದಲು ಬಂದಿದೆ. ಈ ನಿಟ್ಟಿನಲ್ಲಿ ಜಾತ್ರೆಗೆ ಆಗಮಿಸಿರುವ ಜನರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ನ.11ರಿಂದ ಉಪ್ಪುಂದ ಶ್ರೆ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ದೇವಳದ ಸಭಾಭವದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೂಚನೆ ನೀಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ ಪ್ರಸ್ತಾವಿಸಿ, ಸಾರ್ವಜನಿಕರ ಸಲಹೆ ಸೂಚನೆ ಪರಿಗಣಿಸಿ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಉಪ್ಪುಂದ, ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ, ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ, ನಾರಾಯಣ ಖಾರ್ವಿ, ಅರ್ಚಕ ಪ್ರಕಾಶ ಉಡುಪ, ರಾಮ ಎಸ್, ಲಲಿತಾ ಶೆಟ್ಟಿ, ಅಂಬಿಕಾ, ರಾಜೇಶ ದೇವಾಡಿಗ, ಯು.ರವೀಂದ್ರ ಪ್ರಭು, ಜನಾರ್ದನ, ಮಾಚ ಪೂಜಾರಿ, ಪ್ರಭಾರ ಸಿಇಒ ಸುದರ್ಶನ ಎಸ್, ತಹಸೀಲ್ದಾರ ಪ್ರದೀಪ್ ರಾಂ, ವೃತ್ತ ನಿರೀಕ್ಷಕ ಸವಿತ್ರತೇಜ್, ಠಾಣಾಧಿಕಾರಿ ತಿಮ್ಮೇಶ ಬಿ. ಎನ್, ಡಾ.ರಾಜೇಶ್, ಮಾಜಿ ಧರ್ಮದರ್ಶಿ ಬಿಜೂರು ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ ದೇವಾಡಿಗ ವಂದಿಸಿದರು. ಯು. ಸಂದೇಶ ಭಟ್ ನಿರೂಪಿಸಿದರು.
ರಸ್ತೆ ಅಗಲೀಕರಣಕ್ಕೆ ಒತ್ತಾಯ
ದೇವಸ್ಥಾನದ ರಥಬೀದಿ ಕಿರಿದಾಗಿದ್ದು, ಮೇಲ್ನೋಟಕ್ಕೆ ಒತ್ತುವರಿಯಾಗಿದೆ ಎಂಬ ಸಂದೇಹವಿದೆ. ಹಾಗಾಗಿ ಸರ್ವೆ ನಡೆಸಿ ನಂತರ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಅಗಲೀಕರಿಸಬೇಕು ಎಂದು ರಾಣಿಬಲೆ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಒತ್ತಾಯಿಸಿದರು.
ದೇವಳದ ಗರ್ಭಗುಡಿ, ಒಳ ಹೆಬ್ಬಾಗಿಲು, ಗಣಪತಿ ದೇವಸ್ಥಾನ, ಭೋಜನ ಶಾಲೆ, ದೇವಳದ ಒಳಸುತ್ತು ಮತ್ತು ಧ್ವಜಸ್ಥಂಭದ ಎಡಬಲ ಪಾರ್ಶ್ವಗಳಲ್ಲಿ ಶಾಶ್ವತ ನೆರಳಿನ ಆಶ್ರಯಕ್ಕಾಗಿ ಮಾಡುಗಳ ರಚನೆ, ಸಭಾಭವನ ಆಧುನಿಕರಣ, ಪುಷ್ಕರಣಿಯ ಅಭಿವೃದ್ಧಿ ಹಾಗೂ ಭಕ್ತರಿಗಾಗಿ ವಸತಿಗೃಹಗಳ ಅವಶ್ಯಕತೆ ಇದೆ. ಇದಕ್ಕೆ ಸುಮಾರು 25 ಕೋಟಿ ರೂ.ಬೇಕಾಗಿದೆ.
-ಸತೀಶ ಶೆಟ್ಟಿ, ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ ಎಸ್‌ಡಿಪಿಟಿ ಉಪ್ಪುಂದhttps://www.vijayavani.net/adoption-of-hinduism