VIDEO| ರಾಮಮಂದಿರ ಉದ್ಘಾಟನೆಯ ಮೊದಲ ದಿನವೇ ಹರಿದುಬಂತು ಭಕ್ತಸಾಗರ! ಬೆಳಗ್ಗೆ 3 ಗಂಟೆಯಿಂದಲೇ ಭಾರೀ ಕ್ಯೂ!

ವಿಜಯವಾಣಿ - 2024-01-23T085520.703
Published on

ಅಯೋಧ್ಯೆ: ಸೋಮವಾರ (ಜ.22) ಅಯೋಧ್ಯೆಯಲ್ಲಿ ನಡೆದ ಅದ್ದೂರಿ ರಾಮಲಲ್ಲಾ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಬಳಿಕ ಇಂದು ಪ್ರಾರ್ಥನೆ ಸಲ್ಲಿಸಲು ದೇವಾಲಯದ ಮುಖ್ಯದ್ವಾರದಲ್ಲಿ ಭಾರೀ ಭಕ್ತರು ಆಗಮಿಸಿದ್ದು, ಭಕ್ತಿಪೂರ್ವಕ ನಮನ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ.

ಪ್ರಾಣ ಪ್ರತಿಷ್ಠಾ ಸಮಾರಂಭದ ಬಳಿಕ ಮೊದಲ ದಿನವಾದ ಇಂದು ಬೆಳಗ್ಗೆ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರಾರ್ಥನೆ ಸಲ್ಲಿಸಲು ಮತ್ತು ಶ್ರೀರಾಮಲಲ್ಲಾನ ದರ್ಶನ ಪಡೆಯಲು ನಾ ಮುಂದು ತಾ ಮುಂದು ಎಂದು ನೂಕುನುಗ್ಗಲು ಮಾಡಿದ್ದಾರೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಯೋಧ್ಯೆಯ ಭವ್ಯ ರಾಮಮಂದಿರ ಇಂದಿನಿಂದ ಸಾರ್ವಜನಿಕರಿಗೆ ತೆರದಿದ್ದು, ಈ ವಿಷಯ ತಿಳಿದ ಭಕ್ತಾಧಿಗಳು ಇದೀಗ ತಮ್ಮ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕೆ ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿರುವುದು ಮತ್ತಷ್ಟು ವಿಶೇಷ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net