ನಿಯಮಿತ ತಪಾಸಣೆಯಿಂದ ಶ್ರವಣ ದೋಷ ದೂರ : ಮೂಲ್ಕಿ ಲಯನ್ಸ್ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಕಿವಿಮಾತು

New Project (24)
Published on

ಮೂಲ್ಕಿ: ಪಂಚೇಂದ್ರಿಯಗಳಲ್ಲಿ ಕಿವಿ ಬಹಳ ಸೂಕ್ಷ್ಮ ಸಂವೇದಿಯಾಗಿದ್ದು, ನಿಯಮಿತ ತಪಾಸಣೆ ಮೂಲಕ ಶ್ರವಣ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಹೇಳಿದರು.

ಯುವವಾಹಿನಿ ಮೂಲ್ಕಿ ಘಟಕ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ, ಲಯನ್ಸ್ ಕ್ಲಬ್, ಜೆಸಿಐ ಮೂಲ್ಕಿ ಶಾಂಭವಿ ಘಟಕದ ಸಂಯುಕ್ತ ಆಶ್ರಯದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಶ್ರವಣ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಮೂಲ್ಕಿ ಬಿಲ್ಲವ ಸಂದಲ್ಲಿ ನಡೆಯಿತು.

ಮೂಲ್ಕಿ ಬಿಲ್ಲವ ಸಂಘ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ವಲಯದಲ್ಲಿ ಶ್ರವಣ ಪರೀಕ್ಷೆ ಮತ್ತು ಶ್ರವಣ ಸಾಧನಗಳನ್ನು ರಿಯಾಯಿತಿ ದರದಲ್ಲಿ ಲಭ್ಯವಾಗಿಸುವ ಟೀಮ್ ಈಶ್ವರ್ ಮಲ್ಪೆ ಅವರ ಕಾರ್ಯ ಅಭಿನಂದನೀಯ ಎಂದರು.

ಶ್ರವಣ ತಜ್ಞೆ ಡಾ.ಅಂಕಿತಾ, ಈಶ್ವರ್ ಮಲ್ಪೆ ತಂಡದ ಪ್ರಮುಖರಾದ ಲವ ಬಂಗೇರ, ಲಯನ್ಸ್ ಅಧ್ಯಕ್ಷ ರೊಲ್ಫಿ ಡಿಕೋಸ್ತಾ, ಜೆಸಿಐ ಮೂಲ್ಕಿ ಶಾಂಭವಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್, ಲತೀಶ್ ಕಾರ್ನಾಡ್, ಜೆಸಿ ಕೇಶವ ಸುವರ್ಣ ಉಪಸ್ಥಿತರಿದ್ದರು.

ಯುವವಾಹಿನಿ ಅಧ್ಯಕ್ಷ ರಿತೇಶ್ ಕಾರ್ನಾಡ್ ಸ್ವಾಗತಿಸಿದರು. ಉದಯ ಅಮೀನ್ ಮಟ್ಟು ನಿರೂಪಿಸಿದರು. 25 ಜನ ಫಲಾನುಭವಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net