ಕಾಳ್ಯಂಗಾಡು ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠಾಪನೆ

New Project (11)
Published on

ಕಾಸರಗೋಡು: ಕೂಡ್ಲು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಬಾಲಾಲಯ ಪ್ರತಿಷ್ಠಾಪನೆ ಜರುಗಿತು. ಕ್ಷೇತ್ರದ ತಂತ್ರಿವರ್ಯ, ಕುಕ್ಕಾಜೆ ಕ್ಷೇತ್ರದ ಶ್ರೀ ಕೃಷ್ಣ ಗುರೂಜಿ ಬಾಲಾಲಯ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಿದರು.

ಕ್ಷೇತ್ರದ ಮೊಕ್ತೇಸರ ಅಚ್ಚುತ ಕಾಳ್ಯಂಗಾಡ್, ಧರ್ಮದರ್ಶಿ ನಾರಾಯಣ ಪೂಜಾರಿ, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ರಘು ಮೀಪುಗುರಿ, ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಅಧ್ಯಕ್ಷ ಮೋಹನ್ ರಾಜ್, ಪ್ರಧಾನ ಕಾರ್ಯದರ್ಶಿ ಹರೀಶ ಕೆ.ಆರ್, ಕೋಶಾಧಿಕಾರಿ ಶಾಂತ ಕುಮಾರ್ ಮುಂಡಿತ್ತಡ್ಕ, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net