ಕೂಟತ್ತಜೆ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಸಭೆ

New Project (7)
Published on

ಮಂಜೇಶ್ವರ: ಮಾ.30ರಿಂದ ಎ. 6ರ ತನಕ ನಡೆಯಲಿರುವ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಮಾಲೋಚನಾ ಸಭೆ ಗುರುವಾರ ಮುಡಿಪಿನ ಶ್ರೀ ಕಿರಾತೇಶ್ವರ ಸ್ವಾಮಿ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಪ್ರಧಾನ ಸಂಚಾಲಕ ಜಗದೀಶ್ ಆಳ್ವ ಕುವೆತ್ತಬೈಲು ಮಾತನಾಡಿ, ಹೊರೆಕಾಣಿಕೆ ಮೆರವಣಿಗೆಗೆ ರಂಗು ನೀಡುವಂತೆ ವಿವಿಧ ಪ್ರದರ್ಶನಗಳು, ಚೆಂಡೆ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಹಾಗೆಯೇ ಪೂರ್ಣಕುಂಭ ಕಲಶ ಹಿಡಿದು ಮುನ್ನಡೆಯುವ ಮಹಿಳೆಯರು ಹಾಗೂ ಹೊರೆಕಾಣಿಕೆ ವಾಹನಗಳ ಸರತಿ ಸಾಲು ಶಿಸ್ತುಬದ್ಧವಾಗಿ ಸಾಗಲು ಸ್ವಯಂಸೇವಕರು ಮೆರವಣಿಗೆಯುದ್ದಕ್ಕೂ ಜವಾಬ್ದಾರಿ ಹೊತ್ತು ಮೆರುಗು ನೀಡಬೇಕೆಂದು ಕೋರಿದರು.

ಅತ್ಯಗತ್ಯ ಹಾಗೂ ಸಮಿತಿ ತಿಳಿಸಿದ ವಸ್ತುಗಳನ್ನು ಮಾತ್ರ ಹೊರೆಕಾಣಿಕೆ ಮೆರವಣಿಗೆಯಲ್ಲಿ ತರುವುದರಿಂದ ತುಂಬಾ ಸಹಾಯವಾಗುತ್ತದೆ ಎಂದು ರವಿ ರೈ ಪಜೀರು ವಿನಂತಿಸಿದರು. ವಿವಿಧ ಜವಾಬ್ದಾರಿ ಹೊತ್ತ ಮುಖಂಡರು ಹಾಗೂ ಭಕ್ತರು ಸಲಹೆ ನೀಡಿದರು.

ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್, ಕಣಂತೂರು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಚೌಟ ಉಳಿಪಾಡಿಗುತ್ತು, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಧಾನ ಸಂಚಾಲಕ ಜಗದೀಶ್ ಆಳ್ವ ಕುವ್ವೆತ್ತಬೈಲ್ ಹಾಗೂ ನಂದರಾಜ್ ಪಿಜಿನಬೈಲ್, ಕೂಟತ್ತಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಭರತ್ ನಾಯ್ಕ ನಚ್ಚಗುತ್ತು, ಕಾರ್ಯಾಧ್ಯಕ್ಷ ಸತೀಶ್ ಬದಿಯಾರು ಹಾಗೂ ವಿಜೇಶ್ ನಾಯ್ಕ ನಾರ್ಯ ನಡಿಗುತ್ತು, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಕುರ್ಮಾನ್, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ, ಅಸೈಗೋಳಿ ಗುಳಿಗ ಕೊರಗಜ್ಜ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವಿ ರೈ ಪಜೀರು, ಅಭಿಯಂತ ಸುರೇಶ್ ಕೊಂಡೆ ನಾರ್ಯಗುತ್ತು, ಚಂದ್ರಶೇಖರ ಗಟ್ಟಿ ಗುಂಡ್ಯ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಹರೀಶ್ ಶೆಟ್ಟಿ ಪಾವುಲಗುತ್ತು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net