ಕಾಸರಗೋಡು: ಕಾಡುಹಂದಿಗಳ ಗುಂಪು ಅಡ್ಡಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಸವಾರ ಆಲಂಪಾಡಿ ನಿವಾಸಿ ಅಂಗಡಿಮೊಗರು ಕಂಬಾರು ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಇರ್ಫಾನಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಬೆಳಗ್ಗೆ ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ಘಟನೆ ನಡೆದಿದ್ದು, ಅಬ್ದುಲ್ ಸಲಾಂ ಬೆಳಗ್ಗೆ ಮನೆಯಿಂದ ಮಸೀದಿಗೆ ತೆರಳುವ ಹಾದಿಯಲ್ಲಿ ಹಂದಿಗಳ ಗುಂಪು ಏಕಾಏಕಿ ಬೈಕಿಗೆ ಅಡ್ಡ ಸಂಚರಿಸಿದ್ದು, ಇದರಿಂದ ಬೈಕ್ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಳ್ವಾಸ್‌ನ ಪುರುಷ, ಮಹಿಳೆಯರ ತಂಡ ಚಾಂಪಿಯನ್ : ಮಂಗಳೂರು ವಿವಿ ಅಂತರ್ ಕಾಲೇಜು ಖೋಖೋ ಪಂದ್ಯಾಟ