ಇವು ಕ್ಯಾನ್ಸರ್, ಬಂಜೆತನ, ಹಾರ್ಮೋನ್ ಏರುಪೇರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು. ಶೇ. 99ರಷ್ಟು ಅಮೆರಿಕನ್ನರ ರಕ್ತದಲ್ಲಿ ಈ ರಾಸಾಯನಿಕಗಳ ಅಂಶ ಈಗಾಗಲೇ ಪತ್ತೆಯಾಗಿದ್ದು, ಇದು ಜಾಗತಿಕ ಮಟ್ಟದ ಗಂಭೀರ ಸಮಸ್ಯೆಯಾಗಿದೆ. ಮೈಕ್ರೋ ಪ್ಲಾಸ್ಟಿಕ್ ಕಣಗಳು ಜೀರ್ಣಾಂಗದ ಮುಖೇನ ನಿಮ್ಮ ದೇಹ ಸೇರೋದಿಲ್ಲ. ಬದಲಾಗಿ ರಕ್ತದ ಕಣಗಳ ಮೂಲಕ ಯಕೃತ್ತು, ಮೂತ್ರಪಿಂಡಗಳಲ್ಲಿ ಅಡಗಿರುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.