ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಇದು ವರದಾನವಾಗಿದ್ದು, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಫೈಬರ್ ಹೆಚ್ಚಿರುವ ಕಾರಣ, ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಸಿಪ್ಪೆಯಲ್ಲಿ ವಿಟಮಿನ್ ಸಿ, ಬಿ6, ರಿಬೋಫ್ಲಾವಿನ್ ಮತ್ತು ವಿಟಮಿನ್ ಎ ಅಂಶಗಳು ಹೇರಳವಾಗಿವೆ. ಇದು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಸಹಕಾರಿ ಎನ್ನಲಾಗಿದೆ. ಮೆದುಳಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ಗಳು ಈ ಸಿಪ್ಪೆಯಲ್ಲಿದೆ ಎಂದು ಲವ್ನೀತ್ ಬಾತ್ರಾ ಹೇಳಿದ್ದಾರೆ.