ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಕೊಳೆ ಇನ್ನೂ ಉಳಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಎಲ್ಲಾ ಕೂದಲಿನ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುವ ಒಂದು ಸಿಂಪಲ್ ವಿಧಾನವಿದೆ.(Health Tips)
ಇದನ್ನು ಓದಿ: ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಹರಳೆಣ್ಣೆಯು ನಮ್ಮ ತ್ವಚೆಗೆ ಎಷ್ಟು ಪ್ರಯೋಜನಕಾರಿಯೋ, ಕೂದಲಿಗೆ ಎಷ್ಟೋ ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ್ದರಿಂದ ಇಲ್ಲಿ ನಾವು ಹರಳೆಣ್ಣೆಯಿಂದ ಹೇರ್ ವಾಶ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಇದು ಕೂದಲು ಉದುರುವಿಕೆಯನ್ನು ತಡೆಯುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಮುಖಕ್ಕೆ ಹೇಗೆ ಹರಳೆಣ್ಣೆ ಬಳಸುತ್ತಾರೆಯೋ ಅದೇ ರೀತಿ ಕೂದಲಿಗೆ ಹರಳೆಣ್ಣೆ ಬಳಸುತ್ತಾರೆ. ಹರಳೆಣ್ಣೆಯಿಂದ ಹೇರ್ ವಾಶ್ ಮಾಡುವ ವಿಧಾನ ಮತ್ತು ಅದಕ್ಕೆ ಬೇಕಾಗುವ ಪದಾರ್ಥಗಳನ್ನು ಇಲ್ಲಿ ತಿಳಿಸಲಾಗಿದೆ.
ಹರಳೆಣ್ಣೆ ಹೇರ್ ವಾಶ್ಗೆ ಬೇಕಾಗುವ ಪದಾರ್ಥಗಳು
- ಕಾಫಿ ಪುಡಿ – 1 ಟೀಸ್ಪೂನ್
- ನಿಂಬೆ ರಸ – 1/2
- ಹರಳೆಣ್ಣೆ – 1/2 ಟೀಸ್ಪೂನ್
- ಶಾಂಪೂ – 1 ಟೀಸ್ಪೂನ್
- ಬೇವಿನ ಎಲೆ ನೀರು – 1 ಬೌಲ್
ಹರಳೆಣ್ಣೆ ಹೇರ್ ವಾಶ್ ಮಾಡುವುದೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಕಾಫಿ, ನಿಂಬೆ ರಸ, ಹರಳೆಣ್ಣೆ ಮತ್ತು ಬೇವಿನ ನೀರನ್ನು(ನೀರಿನಲ್ಲಿ ಬೇವಿನ ಎಲೆ ನೆನೆಸಿರುವ ನೀರು) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ನಂತರ ಒಂದು ಚಮಚ ಶಾಂಪೂ ಸೇರಿಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸಿದ್ಧವಿರುವ ಹೇರ್ ವಾಶ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಶಾಂಪೂವಿನಂತೆ ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ.ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ನಿಮ್ಮ ನೆತ್ತಿಯ ಕೊಳೆಯನ್ನು ಹೇಗೆ ತೆಗೆಯುತ್ತದೆ ಮತ್ತು ನಿಮ್ಮ ಕೂದಲು ಹೇಗೆ ಹೊಳೆಯುತ್ತಿದೆ ಎಂಬುದನ್ನು ನೋಡಿ. ವಾರಕ್ಕೊಮ್ಮೆ ನೀವು ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ| Health Tips