More

    ಈ ಡ್ರೈಪ್ರೂಟ್​​ ಸೇವನೆಯಿಂದ ಎಷ್ಟೆಲ್ಲಾ ಉಪಯೋಗ ನೋಡಿ..

    ಬೆಂಗಳೂರು: ಸಾಮಾನ್ಯವಾಗಿ ಹಿರಿಯರು ಮತ್ತು ವೈದ್ಯರು, ಡ್ರೈ ಫ್ರೂಟ್ಸ್‌ ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದನ್ನು ಗಮನಿಸಿಯೇ ಇರುತ್ತೇವೆ. ಯಾವ ಡ್ರೈ ಫ್ರೂಟ್ಸ್​​ನಿಂದ ನಮಗೇನು ಪ್ರಯೋಜನ ಎಂದು ತಿಳಿದುಕೊಂಡರೆ ಒಳ್ಳೆಯದು. ಇವುಗಳಲ್ಲಿಯೇ ಒಂದಾದ ವಾಲ್‌ನಟ್​ ಅನ್ನು ಸೇವಿಸುವುದರಿಂದ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

    ವಿವಿಧ ರೀತಿಯ ಖನಿಜಾಂಶಗಳು, ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್​ಗಳನ್ನು ಹೊಂದಿರುವ ವಾಲ್‌ನಟ್‌ ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಎರಡು ವಾಲ್‌ನಟ್‌ಗಳನ್ನು ಪ್ರತಿದಿನ ತಪ್ಪದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

    ಇದನ್ನೂ ಓದಿ: ಮತ ಚಲಾಯಿಸಿದ ಬೆನ್ನಿಗೇ ‘ಕರೆಂಟ್ ಶಾಕ್​’: ಏ. 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ!

    ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ವಾಲ್‌ನಟ್‌ ಮೆದುಳಿನ ಕಾರ್ಯ ಮತ್ತು ಬೆಳವಣಿಗೆಗೆ ಅವಶ್ಯಕವಾಗಿರುವ ಕೊಬ್ಬಿನಾಮ್ಲಗಳನ್ನು ಒದಗಿಸುವುದರ ಜತೆಗೆ ಇದೊಂದು ಉತ್ತಮ ಆಹಾರ ಎಂದು ಕೆಲ ಅಧ್ಯಯನಗಳು ಹೇಳಿವೆ.

    ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಇದು, ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತನಾಳಗಳ ವಿಶ್ರಾಂತಿ ಮತ್ತು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: VIDEO | ಬಿಯರ್‌ನಿಂದ ಚಲಿಸುವ ಬೈಕ್; ಗಂಟೆಗೆ 240 ಕಿಮೀ ವೇಗ

    ಹಲವಾರು ಸೋಂಕುಗಳಿಂದ ಮತ್ತು ಅನಾರೋಗ್ಯದಿಂದ ಕಾಪಾಡಲು ಸಹಾಯ ಮಾಡುವ ಇದು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಒಟ್ಟಾರೆ ವಾಲ್​ನಟ್​ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದ್ದು, ದೇಹವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts