ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla

ವಿಜಯವಾಣಿ - 2025-02-17T075754.345
Published on

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯಲಾಗುತ್ತದೆ. ಇದು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದರ ಜತೆಗೆ ದೇಹಕ್ಕೆ ಬಹಳ ಉತ್ತಮ ಎಂದು ಗುರುತಿಸಿಕೊಂಡಿದೆ. ವರ್ಷದ ಪೂರ ಲಭಿಸುವ ನೆಲ್ಲಿಕಾಯಿಯ ಸೇವನೆ ನಮ್ಮ ದೇಹಕ್ಕೆ ಹತ್ತು ಹಲವು ಪ್ರಯೋಜನಗಳು ನೀಡುತ್ತದೆ ಎಂಬುದು ನಮಗೆ ತಿಳಿದ ಸಂಗತಿಯೇ ಆದರೂ ಇದರ ಪ್ರಯೋಜನ ಬೇಸಿಗೆ ಕಾಲದಲ್ಲಿ ಹೆಚ್ಚು ಎಂಬ ವಿಷಯ ಮಾತ್ರ ಅಷ್ಟಾಗಿ ತಿಳಿದಿಲ್ಲ.

ನೈಸರ್ಗಿಕ ಕೂಲರ್​

ನೆಲ್ಲಿಕಾಯಿ ಸೇವನೆ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಒಳ್ಳೆಯದು. ಇನ್ನೇನು ಶಿವರಾತ್ರಿ ಕಳೆಯುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತದೆ. ಈ ಬಿರು ಬಿಸಿಲಿನಲ್ಲಿ ಸೇವಿಸುವ ನೆಲ್ಲಿಕಾಯಿ, ನಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದರ ಮಾಹಿತಿ ಹೀಗಿದೆ ಗಮನಿಸಿ. ಬೇಸಿಗೆಗಾಲದಲ್ಲಿ ಆಮ್ಲ ದೇಹದಲ್ಲಿ ಕೂಲಿಂಗ್ ಅಂಶವಾಗಿ ಕೆಲಸ ಮಾಡುತ್ತದೆ ಹಾಗೂ ಹೆಚ್ಚಾಗಿ ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ.

ವಿಟಮಿನ್​ ಸಿ ಹೇರಳ

ಈ ಹುಳಿ ಹಣ್ಣಿನಲ್ಲಿರುವ ವಿಟಮಿನ್​ 'ಸಿ' ಅಂಶ ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚಿದ್ದು, ಇದನ್ನು ಸೇವಿಸುವುದರಿಂದ ಟಾನಿನ್​ ಅಂಶ ಹೆಚ್ಚಾಗಿ, ಚರ್ಮದ ಸುಕ್ಕು ನಿವಾರಣೆಯಾಗುತ್ತದೆ. ಇದರಲ್ಲಿ ವಿಟಮಿನ್, ಕಬ್ಬಿಣ, ಫೈಬರ್​, ಪೋಟ್ಯಾಶಿಯಂ ಮತ್ತು ಪೋಷಕಾಂಶಗಳು ಹೇರಳವಾಗಿರುವ ಕಾರಣ ದೇಹದಲ್ಲಿನ ಹಲವಾರು ಸಮಸ್ಯೆಗಳ ವಿರುದ್ಧ ನೆಲ್ಲಿಕಾಯಿ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಆಮ್ಲ ರಸ

ನೆಲ್ಲಿಕಾಯಿಯಲ್ಲಿ ಆ್ಯಂಟಿ-ಆಕ್ಸಿಡೆಂಟ್​ಗಳ ಅಂಶ ಬಲಿಷ್ಟವಾಗಿರುವ ಕಾರಣ ಇದು ಹೃದಯ ಸಮಸ್ಯೆಗಳನ್ನು ತಡೆಗಟ್ಟುವುದರ ಜತೆಗೆ ಹೃದಯದ ಸ್ನಾಯುಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸಮಯದಲ್ಲಿ ಆಮ್ಲ ರಸ​ ದೇಹಕ್ಕೆ ತಂಪು ಹಾಗೂ ಕಾಂತಿಯುತವಾದ ತ್ವಚೆ ನೀಡುತ್ತದೆ ಮತ್ತು ತುರಿಕೆ, ಮೊಡವೆಗಳಿಂದ ಮುಕ್ತಿ ಕೊಡುತ್ತದೆ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net