PHOTOS| ಕಾಡಿನ ರಾಜನಿಗೂ ಹೆದರದೆ ಅದರ ಮೇಲೆಯೇ ಹಾದುಹೋದ ಆಮೆಯ ಎದೆಗಾರಿಕೆಗೆ ನೆಟ್ಟಿಗರು ಫಿದಾ!

Tortise 1
Published on

ನವದೆಹಲಿ: ಆರಾಮವಾಗಿ ನಿದ್ರಿಸುತ್ತಾ ವಿಶ್ರಾಂತಿ ಪಡೆಯುತ್ತಿದ್ದ ಸಿಂಹವೊಂದರ ಮೇಲೆ ದಿಟ್ಟ ಆಮೆಯೊಂದು ತನ್ನ ಪಾಡಿಗೆ ತಾನು ಹಾದುಹೋದಂತಹ ಅದ್ಭುತ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಸಂಚಲನ ಸೃಷ್ಟಿಸಿದೆ.

ದಕ್ಷಿಣಾ ಆಫ್ರಿಕಾದ ಅರಣ್ಯದಲ್ಲಿ ವನ್ಯಜೀವಿ ಮಾರ್ಗದರ್ಶಕರೊಬ್ಬರು ಫೋಟೋಗಳನ್ನು ಸರೆಹಿಡಿದಿದ್ದಾರೆ. ಆಗ ತಾನೇ ಹೊಟ್ಟೆ ತುಂಬಾ ಕಾಡೆಮ್ಮೆಯ ಮಾಂಸವನ್ನು ತಿಂದು ಮಲಗಿಕೊಂಡಿದ್ದ ಎರಡು ಸಿಂಹಗಳ ಮಧ್ಯೆ ಆಮೆ ಸಿಲುಕಿಕೊಂಡಿತ್ತು. ಆದರೂ ಹೆದರದೆ ಸಿಂಹವೊಂದರ ಕಾಲಿನ ಮೇಲೇರಿ ಆಮೆ ಬಚಾವ್​ ಆಗಿದೆ.

ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಹೋಡ್ಸ್‌ಪ್ರೂಟ್​ ನಗರದ ಮುಖ್ಯ ವನ್ಯಜೀವಿ ಮಾರ್ಗದರ್ಶಕರಾಗಿರುವ ಜೋಹಾನ್​ ಅಡಾಲ್ಫ್​ ಸ್ಮಾಲ್​ಮ್ಯಾನ್​(35) ಈ ರೋಚಕ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಸಿಂಹಕ್ಕೂ ತೊಂದರೆ ಕೊಡದೆ ಅದರ ಕಾಲಿನ ಮೇಲೆ ನಿಧಾನವಾಗಿ ಹಾದುಹೋದ ಆಮೆಯ ಬಗ್ಗೆ ಸ್ಮಾಲ್​ಮ್ಯಾನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೃಷ್ಟವೆಂದರೆ ಸಿಂಹ ಎಚ್ಚರಗೊಳ್ಳದೇ ಭಾರಿ ನಿದ್ರೆಯಲ್ಲಿ ನಿರತವಾಗಿತ್ತು. ಒಂದೇ ವೇಳೆ ಅದು ಎಚ್ಚರಗೊಂಡಿದ್ದರೆ ಆಮೆಯ ಗತಿ ಏನಾಗುತ್ತಿತ್ತೋ? ಅಪಾಯಕಾರಿ ಸ್ಥಿತಿಯಲ್ಲಿ ಆಮೆಯೂ ಬಚಾವ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net