

ತೆಲಂಗಾಣ: ಭಾರತವನ್ನು ಇಷ್ಟಪಡದ ಜನರೇ ಇಲ್ಲ. ಭಾರತೀಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ವಿದೇಶಿಯರು ಇಷ್ಟಪಡುತ್ತಾರೆ. ಇಲ್ಲಿಗೆ ಸೊಸೆಯಾಗಿ ಬರಲು ಬಯಸುತ್ತಾರೆ. ಅಂತಹ ಆಸ್ಟ್ರೇಲಿಯನ್ ಹುಡುಗಿಯ ಕಥೆ ಇದು. ಆಸ್ಟ್ರೇಲಿಯಾದ ಹುಡುಗಿಯೊಬ್ಬಳು ತೆಲಂಗಾಣದ ಹುಡುಗನನ್ನು ಪ್ರೀತಿಸಿ ಮದುವೆಯಾಗಿ ತೆಲುಗಿನ ಸೊಸೆಯಾಗಿದ್ದಾಳೆ.
ಶಾಸ್ತ್ರಿನಗರ ಕಾಲೋನಿಯ ಸದಾನಂದ, ಪದ್ಮಾ ದಂಪತಿಯ ಪುತ್ರ ಕಾರ್ತಿಕ್ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದನು. ಕಾರ್ತಿಕ್ಗೆ ಅಲ್ಲಿ ಹಾನಾ ಎಂಬ ಹುಡುಗಿಯ ಪರಿಚಯವಾಗಿದೆ. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. ಕಾರ್ತಿಕ್ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಹನಾ ವಿಜ್ಞಾನಿಯಾಗಿ ಕೆಲಸ ಮಾಡುತ್ತಾಳೆ. ನಂತರ ಇಬ್ಬರು ವಿವಾಹವಾಗಲು ನಿರ್ಧಾರ ಮಾಡಿದ್ದಾರೆ.
ಹಿರಿಯರ ಮನವೊಲಿಸಿ ಇಂದು ನಿರ್ಮಲ್ ಜಿಲ್ಲಾ ಕೇಂದ್ರದ ನಗರದ ಫಂಕ್ಷನ್ ಹಾಲ್ ನಲ್ಲಿ ವಿವಾಹವಾಗಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ, ವೈದಿಕ ಪಂಡಿತರು ಮಂತ್ರೋತ್ಸವದ ಸಮಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ನನಗೆ ತುಂಬಾ ಇಷ್ಟ ಎಂದು ವಧು ಹೇಳಿದ್ದಾರೆ. ಈ ಜೋಡಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.