31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ 90ನೇ ವಯಸ್ಸಿನಲ್ಲಿ ಹೆರಿಗೆ

pregnant women
ಸಾಂದರ್ಭಿಕ ಚಿತ್ರ
Published on

ಚೀನಾ: ಸಾಮಾನ್ಯವಾಗಿ ಮಹಿಳೆಯರು ಗರ್ಭಧಾರಣೆಯಾದ ಒಂಬತ್ತು, ಹತ್ತು ತಿಂಗಳೊಳಗೆ ಅಥವಾ ಕೆಲವರಿಗೆ ಸ್ವಲ್ಪ ಮುಂಚಿತವಾಗಿ ಹೆರಿಗೆ ಆಗುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ 60 ವರ್ಷ ಗರ್ಭ ಧರಿಸಿದ್ದಾಳೆ. ವಾಸ್ತವವಾಗಿ ಇದು ನಿಜವಾಗಿಯೂ ನಡೆದ ಘಟನೆಯಾಗಿದೆ.

ಈ ವಿಚಿತ್ರ ಪ್ರಕರಣ ಚೀನಾದಲ್ಲಿ ನಡೆದಿದ್ದು, ಆದರೆ ಇಷ್ಟು ವರ್ಷ ತಾಯಿ ಗರ್ಭ ಧರಿಸಿದ್ದು ಹೇಗೆ.. ಇದು ನಿಜವಾಗಿ ಸಾಧ್ಯವೇ ಎಂಬ ಅನುಮಾನ ವೈದ್ಯರನ್ನೂ ಗೊಂದಲಕ್ಕೀಡು ಮಾಡಿದೆ. ಇಷ್ಟು ವರ್ಷಗಳ ಕಾಲ ಆ ಗರ್ಭವನ್ನು ಹೊತ್ತುಕೊಂಡು ಬದುಕಿದ್ದು ಹೇಗೆ ಎಂದು ಅವರು ಆಶ್ಚರ್ಯಪಟ್ಟರು. ಆದರೆ ನಿಜವಾಗಿ ಏನಾಯಿತು ಎಂದು ತಿಳಿಯಲು ನೀವು ಈ ಸ್ಟೋರಿ ಓದಲೇಬೇಕು.....

pregnant

ಚೀನಾದಲ್ಲಿ ಹುವಾಂಗ್ ಯಿಜುನ್ (92) ಎಂಬ ಮಹಿಳೆ 1948 ರಲ್ಲಿ 31 ವರ್ಷದವಳಿದ್ದಾಗ ಗರ್ಭಿಣಿಯಾದರು. ಆದರೆ ಈ ಸಂತೋಷದ ವಿಷಯ ಕೇಳಿದ ಮಹಿಳೆಗೆ ಆಘಾತಕಾರಿ ವಿಷಯವೂ ಕಾದಿತ್ತು.

ವೈದ್ಯರ ಪ್ರಕಾರ, ಗರ್ಭಾವಸ್ಥ ಸಮಯದಲ್ಲಿ ಅಂಡಾಣು ಗರ್ಭದೊಳಗೆ ಬೆಳೆಯಬೇಕು. ಸಾಮಾನ್ಯವಾಗಿ, ಗರ್ಭಾವಸ್ಥೆಯಲ್ಲಿ, ಅಂಡಾಣು ಫಾಲೋಪಿಯನ್ ಟ್ಯೂಬ್‌ಗಳಿಗೆ ಅಂಟಿಕೊಳ್ಳುತ್ತದೆ, ಆದರೆ ಈ ಮಹಿಳೆಗೆ ಅಂಡಾಣು ಟ್ಯೂಬ್‌ಗಳ ಹೊರಗೆ ಅಂಟಿಕೊಂಡಿರುತ್ತದೆ. ಪರಿಣಾಮವಾಗಿ ಈ ಗರ್ಭಾವಸ್ಥೆಯನ್ನು 'ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆ' ಎಂದು ಕರೆಯಲಾಗುತ್ತದೆ.

Pregnant lady

ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆಯ ಸಂದರ್ಭಗಳಲ್ಲಿ, ಬೆಳವಣಿಗೆಯಾಗುತ್ತಿರುವ ಭ್ರೂಣವು ಹೊಟ್ಟೆಯೊಳಗಿನ ವಿವಿಧ ಅಂಗಗಳಿಗೆ ಅಂಟಿಕೊಳ್ಳುತ್ತದೆ. ಇದು ಯಕೃತ್ತು, ಡಯಾಫ್ರಾಮ್, ಕರುಳುಗಳು ಅಥವಾ ಗುಲ್ಮದಂತಹ ಅಂಗಗಳಿಗೆ ಅಂಟಿಕೊಂಡು ಬೆಳೆಯುತ್ತದೆ. ಇಧೆ ಅಪಾಯದಲ್ಲಿ ತಾತಯಿ ಮಗು ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಿಬ್ಬೊಟ್ಟೆಯ ಗರ್ಭಾವಸ್ಥೆಯುಲ್ಲಿ ತಾಯಿ ಮತ್ತು ಮಗುವಿಗೆ ಅಪಾಯಗಳಿವೆ. ಅಂತಹ ಸಂದರ್ಭಗಳಲ್ಲಿ ಜನಿಸಿದ ಶಿಶುಗಳು ಆರೋಗ್ಯವಾಗಿರುವುದಿಲ್ಲ, ಗರ್ಭಾಶಯದ ಹೊರಗೆ ಭ್ರೂಣವು ಬೆಳೆಯುತ್ತಿದೆ. ಕೂಡಲೇ ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು.

ಆದರೆ ಹುವಾಂಗ್ ಯಿಜುನ್ ಆಗಲೇ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಆಕೆಗೆ ಭ್ರೂಣವನ್ನು ತೆಗೆಯಲು ಅವಕಾಶವಿರಲಿಲ್ಲ. ಕೊನೆಗೆ ಅದೇನಿದ್ದರೂ ಹಾಗೆಯೇ ಹೊಟ್ಟೆಯಲ್ಲಿ ಉಳಿಯಿತು. ಹುವಾಂಗ್‌ನ ಹೊಟ್ಟೆಯಲ್ಲಿದ್ದ ಮಗು ಆಕೆಯ ದೇಹವು ತನ್ನಿಂದ ತಾನೇ ಹೊರಹಾಕಲು ಸಾಧ್ಯವಾಗದ ಗಾತ್ರಕ್ಕೆ ಬೆಳೆದಿತ್ತು. ಆದರೆ ವಿಚಿತ್ರವೆಂದರೆ ಆಕೆಗೆ ಯಾವುದೇ ನೋವು ಅಥವಾ ಗರ್ಭಪಾತದಂತಹ ರಕ್ತಸ್ರಾವವಾಗಿರಲಿಲ್ಲ. ಆದ್ದರಿಂದ ಅವಳು ವರ್ಷಗಟ್ಟಲೆ ಗರ್ಭ ಧರಿಸಿದಳು. ಹೀಗೆ ಸುಮಾರು 61 ವರ್ಷಗಳು ಕಳೆದಿವೆ. ಅಂತಿಮವಾಗಿ 90 ನೇ ವಯಸ್ಸಿನಲ್ಲಿ ವೈದ್ಯರ ಬಳಿ ಬಂದಿದ್ದಾಳೆ. ಕೊನೆಗೆ ಆಕೆಯ ಹೊಟ್ಟೆಯೊಳಗಿದ್ದ ಮಗು ವನ್ನು ಹೊರಗೆ ತೆಗಯಲಾಯಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net