
ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಪರ್ಪುಂಜ ಜಂಕ್ಷನ್ ಹತ್ತಿರ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಪಾಯಕಾರಿಯಾಗಿ ಬೀಳುವ ಸ್ಥಿತಿಯಲ್ಲಿದ್ದ ಒಣ ಮರವನ್ನು ಅರಣ್ಯ ಇಲಾಖೆ ಬುಧವಾರ ತೆರವುಗೊಳಿಸಿದೆ.
ಲಕ್ಷ್ಮೀ ಹಾಗೂ ಗಿರಿಜಾ ಎಂಬುವರು ತಮ್ಮ ಮನೆ ಬಳಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಒಣ ಮರ ತೆರವುಗೊಳಿಸುವಂತೆ ವರ್ಷದ ಹಿಂದೆಯೇ ಸ್ಥಳೀಯ ಗ್ರಾಪಂಗೆ ಮನವಿ ಮಾಡಿದ್ದರು. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ನಡೆದ ಒಳಮೊಗ್ರು ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ಗ್ರಾಪಂ ವತಿಯಿಂದ ಅರಣ್ಯ ಇಲಾಖೆಗೆ ನಿರ್ಣಯ ಬರೆಯಲಾಗಿತ್ತು. ಆದರೂ ಅರಣ್ಯ ಇಲಾಖೆ ಇದನ್ನು ನಿರ್ಲಕ್ಷಿಸಿತ್ತು. ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಅವರು ಈ ವಿಚಾರವನ್ನು ಶಾಸಕ ಅಶೋಕ್‌ಕುಮಾರ್ ರೈ ಗಮನಕ್ಕೆ ತಂದಿದ್ದು, ಸ್ಪಂದಿಸಿದ ಶಾಸಕರು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಬಿ.ಕೆ ಸೂಚಿಸಿದ್ದಾರೆ. ಸಂಶುದ್ದೀನ್ ಹಾಗೂ ತಂಡ ಮರ ಕಡಿದಿದ್ದು, ಗ್ರಾಪಂ ಸಿಬ್ಬಂದಿ, ಸ್ಥಳೀಯರು ಸಹಕರಿಸಿದರು.
ಮೋದಿ ಫ್ಯಾನ್ಸ್‌ನಿಂದ ವಿಶೇಷ ಪೂಜೆ: ಕೇಂದ್ರ ಸರ್ಕಾರದ 11ನೇ ವರ್ಷಾಚರಣೆ