

ವಿಶಾಖಪಟ್ಟಣ: ತೆಲಂಗಾಣ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನೆರೆಯ ಆಂಧ್ರದಲ್ಲೂ ಅಕ್ರಮ ಹಣ ಸಾಗಾಣಿಕೆ ಸದ್ದು ಮಾಡುತ್ತಿದೆ. ಅನುಮಾನ ಬಾರದಿರಲೆಂದು ವಾಷಿಂಗ್ ಮೆಷಿನ್‌ಗಳಲ್ಲಿ 1ಕೋಟಿ ರೂ.ಗೂ ಹೆಚ್ಚು ನಗದು ಸಾಗಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ನೋಟುಗಳ ಕಟ್ಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ: ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ
ವಿಶಾಖದಿಂದ ವಿಜಯವಾಡಕ್ಕೆ ಬುಧವಾರ ಆಟೋದಲ್ಲಿ ವಾಷಿಂಗ್ ಮೆಷಿನ್‌ಗಳಲ್ಲಿ 1.30 ಕೋಟಿ ರೂ.ಗಳನ್ನು ಸಾಗಿಸುತ್ತಿದ್ದಾಗ ಎನ್‌ಎಡಿ ಜಂಕ್ಷನ್ ಬಳಿ ಪೊಲೀಸರು ದಾಳಿ ನಡೆಸಿ ಹಣ ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಹಣದ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ಇದನ್ನು ಹವಾಲಾ ನಗದಾಗಿದೆ ಎಂದು ಶಂಕಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಸಿದ್ಧ ಕಂಪನಿಯೊಂದರಿಂದ ಹಣ ಸ್ಥಳಾಂತರಗೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.