ಹಾಸನ: ಸಾಲಭಾದೆ ತಾಳದೇ 13 ವರ್ಷದ ಮಗಳೊಂದಿಗೆ ಹೇಮಾವತಿ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ!

madam
Published on

ಹಾಸನ: ಆನ್​ಲೈನ್ ಗೇಮ್ ಅನ್ನೋದು ಒಂಥರಾ ಗೀಳು ಇದ್ದಂಗೆ. ಈ ಗೀಳಿಗೆ ಅಡಿಕ್ಟ್ ಆಗಿ ಎಷ್ಟೋ ಜನರ ಬದುಕೆ ಬರ್ಬಾದ್ ಆಗಿ ಹೋಗಿದೆ. ಇವತ್ತಿನ ಸ್ಟೋರಿಯಲ್ಲೂ ಈ ಆನ್​​ಲೈನ್​ ಗೇಮ್​ ಹುಚ್ಚಿಗೆ ಬಿದ್ದವನು ಲಕ್ಷ ಲಕ್ಷ ಸಾಲ ಮಾಡಿ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು... ಲಕ್ಷ ಲಕ್ಷ ಸಾಲ ಮಾಡಿ ಸಾಲಭಾದೆ ತಾಳಲಾರದೇ ಪತ್ನಿ ಮತ್ತು ಮಗಳು ಸಮೇತ ಮೂವರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ.

ಶ್ರೀನಿವಾಸ್ (43), ಆತನ ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಮೃತ ದುರ್ದೈವಿಗಳು. ಶ್ರೀನಿವಾಸ್ ಕಾರು ಚಾಲಕನಾಗಿದ್ದು, ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪುತ್ರಿ ನಾಗಶ್ರೀ 7ನೇ ತರಗತಿ ಓದುತ್ತಿದ್ದಳು.

ಕಾರು ಚಾಲಕನಾಗಿದ್ದ ಶ್ರೀನಿವಾಸ್ ಕಾರು ಚಾಲಕನಾಗಿದ್ದ ಕೊರೊನಾ ವೇಳೆ ಊರು ಸೇರಿದ್ದ. ನಂತರ ಬದುಕು ಕಟ್ಟಿಕೊಳ್ಳಬೇಕಿದ್ದ ಇವರು ಆನ್‌ಲೈನ್‌‌ ಗೇಮ್​ ಚಟಕ್ಕೆ ಬಿದ್ದು, ಸಾಲ ಮಾಡಿಕೊಂಡಿದ್ದ, ಸಾಲ ಮರು ಪಾವತಿಸುವಂತೆ ಸಾಲ ನೀಡಿದವರು ಪೀಡಿಸುತ್ತಿದ್ದರು. ಸಾಲ ವಾಪಾಸ್ ನೀಡಲು ಸಾಧ್ಯವಾಗದೇ ಶ್ರೀನಿವಾಸ್ ಸಂಕಷ್ಟಕ್ಕೆ ಸಿಲುಕಿದ್ದ.

ಕಳೆದ ಮಂಗಳವಾರದಿಂದ ಕಾಣಿಯಾಗಿದ್ದ ಈ ಮೂವರಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಅವರ ಸುಳಿವು ದೊರೆಯದಿದ್ದಾಗ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬುಧವಾರ ಸಂಜೆ ತಾಲೂಕಿನ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದ್ದು, ಶವಗಳನ್ನು ಹೊರ ತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net