4 ಲಕ್ಷ ರೂಪಾಯಿ, ಕಾರು, ತೇಗದ ಪೀಠೋಪಕರಣಗಳಿಗಾಗಿ ಮುರಿದು ಬಿದ್ದ ಸಂಬಂಧ!

Haryana
Published on

ನವದೆಹಲಿ: ವರದಕ್ಷಿಣೆ ಎಂಬ ಭೂತ ಇಂದಿಗೂ ಮನೆಗಳ ಸುಖ-ಶಾಂತಿ ಹಾಳು ಮಾಡುವ ಕೆಲಸ ಮಾಡುತ್ತಿದೆ. ನುಹ್ ಜಿಲ್ಲೆಯಿಂದ ಇಂಥದ್ದೊಂದು ಪ್ರಕರಣ ಮುನ್ನೆಲೆಗೆ ಬಂದಿದೆ.

ಒಬ್ಬ ಹುಡುಗಿಯ ತಂದೆ ಮಗಳ ಮದುವೆಗಾಗಿ ಬ್ಯಾಂಕಿನಿಂದ ಸಾಲ ಪಡೆದು ಅವನ ಸ್ಥಿತಿಗೆ ಅನುಗುಣವಾಗಿ ವರದಕ್ಷಿಣೆ ವಸ್ತುಗಳನ್ನು ಖರೀದಿಸಿ ಮದುವೆಗೆ ಮುಂಚೆಯೇ ಹುಡುಗನ ಕಡೆಗೆ ಆ ವಸ್ತುಗಳನ್ನು ಕಳುಹಿಸುತ್ತಾರೆ. ಆದರೆ ವರದಕ್ಷಿಣೆ ಬೇಡಿಕೆ ಈಡೇರದ ಕಾರಣ ಹುಡುಗನ ಕಡೆಯವರು ವರದಕ್ಷಿಣೆ ವಸ್ತುಗಳನ್ನು ವಾಪಸ್ ನೀಡಿದ್ದಲ್ಲದೆ, ಮದುವೆಯಾಗಿ 4 ದಿನಗಳ ನಂತರ ಸಂಬಂಧ ಮುರಿದುಕೊಂಡಿದ್ದಾರೆ.

ಮದುವೆ ಮೆರವಣಿಗೆ ಮಲಾಬ್ ಗ್ರಾಮದ ನೌಷಾದ್ ಅವರ ಮಗ ಶಹಾಬುದ್ದೀನ್ ಬರುವ ಜುಲೈ 1 ರಂದು ಬರ್ಕಾ ಅಲಿಮುದ್ದೀನ್ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ ಈ ಮದುವೆಯಾಗಿ ನಾಲ್ಕು ದಿನಗಳ ನಂತರ ಸಂಕಷ್ಟ ಎದುರಾಗಿದೆ.

ಕಾರಿನ ಬೇಡಿಕೆಯಿಂದಾಗಿ ಸಂಬಂಧ ಮುರಿದುಬಿದ್ದಿದೆ: ವರದಕ್ಷಿಣೆ ಸಾಮಗ್ರಿಯನ್ನು ವರನ ಮೆನೆಗೆ ತಲುಪಿಸಲಾಗಿದೆ. ನಂತರ ವರನ ಕಡೆಯ ಜನರು 4 ಲಕ್ಷ ರೂಪಾಯಿ ನಗದು ಹಾಗೂ ಸ್ವಿಫ್ಟ್ ಕಾರಿಗೆ ಬೇಡಿಕೆ ಇಟ್ಟಿದ್ದರು. ಇದಲ್ಲದೇ ವರನ ಕಡೆಯವರಿಗೆ ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬೇಕಾಗಿದ್ದವು ಆದರೆ ಬಡ ಹುಡುಗಿಯ ತಂದೆಗೆ ಸಾಧ್ಯವಾಗಲಿಲ್ಲ. ನಂತರ, ಮಂಗಳವಾರ ಬೆಳಿಗ್ಗೆ, ಹುಡುಗನ ಕಡೆಯವರು ವಧುವನ್ನು ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿದ್ದಾರೆ. ಹುಡುಗಿ ಕಡೆಯವರು ಗಮನಿಸಿ ಇದೀಗ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ವರದಕ್ಷಿಣೆಗಾಗಿ ಹಲವು ವಿವಾಹಗಳು ಮುರಿದು ಬಿದ್ದಿವೆ: ಇದೇ ಮೊದಲಲ್ಲ, ಈ ಹಿಂದೆಯೂ ಈ ಪ್ರದೇಶದಲ್ಲಿ ವರದಕ್ಷಿಣೆಯ ದುರಾಸೆಯಿಂದ ಹಲವು ಮದುವೆಗಳು ಮುರಿದು ಬಿದ್ದಿವೆ. ಅಂತಹವರ ವಿರುದ್ಧ ಸಕಾಲದಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಇಂತಹ ಸಮ್ಯೆಗಳು ನ್ಯಾಯಕ್ಕಾಗಿ ಸಂತ್ರಸ್ತ ಕುಟುಂಬದವರು ಮಹಿಳಾ ಪೊಲೀಸ್ ಠಾಣೆ ಸುತ್ತುತ್ತಿದ್ದಾರೆ. ಈಗ ಇಂತಹ ವರದಕ್ಷಿಣೆ ದುರಾಸೆಯವರಿಗೆ ಮಗಳನ್ನು ಕೊಡುವುದಿಲ್ಲ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net