

ನವದೆಹಲಿ: ಆಹಾರ ಪ್ರಿಯರು, ವಿಭಿನ್ನವಾದ ರುಚಿಯನ್ನು ಹುಡುಕುತ್ತಿರುತ್ತಾರೆ. ಇತ್ತೀಚೆಗೆ ವಿವಿಧ ಆಹಾರ ಸಂಯೋಜನೆಗಳು ಜನರನ್ನು ಹೆದರಿಸುತ್ತಿವೆ. ಕೆಲವು ಕಾಂಬಿನೇಷನ್ಗಳನ್ನು ತಿಂದರೆ ಏನಾಗಬಹುದು ಎಂಬ ಆತಂಕವೂ ಆಹಾರ ಪ್ರಿಯರದ್ದಾಗಿದೆ. ಇದೇ ವೇಳೆ ತೈವಾನೀಸ್ ರೆಸ್ಟೋರೆಂಟ್ ಖಾದ್ಯವೊಂದು ಅಂತರ್ಜಾಲವನ್ನು ಬೆಚ್ಚಿಬೀಳಿಸಿದೆ.
'ಗಾಡ್ಜಿಲ್ಲಾ ರಾಮೆನ್' ಎಂದು ಕರೆಯಲ್ಪಟ್ಟ, ಮೊಸಳೆಯ ಕಾಲನ್ನು ನೋಡಿ ಪ್ರೇಕ್ಷಕರು ನಡುಗಿದರು. ಈ ಖಾದ್ಯದ ಫೋಟೋ ಆಹಾರ ಪ್ರಿಯರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ 58 ವರ್ಷದ ಮಹಿಳೆ!
'ಗಾಡ್ಜಿಲ್ಲಾ ರಾಮೆನ್' ಎಂದು ಕರೆಯಲ್ಪಡುವ ಈ ಖಾದ್ಯವು ಮೊಸಳೆಯ ಕಾಲನ್ನು ಹೊಂದಿದೆ. ಮೊಸಳೆಯ ಕಾಲನ್ನು ಹಬೆಯಾಡಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಈ ಖಾದ್ಯದಲ್ಲಿ 40 ವಿಧದ ಮಸಾಲೆಗಳನ್ನು ಬಳಸಲಾಗುತ್ತದೆ. ತೈವಾನ್ನಿಂದ ಖಾದ್ಯಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಆದರೆ ನೆಟ್ಟಿಗರು ಈ ಖಾದ್ಯದ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ, ಇದು ನೋಡಲು ಭಯಾನಕ, ವಿಚಿತ್ರವಾಗಿ ಮತ್ತು ಅಸಹ್ಯಕರವಾಗಿ ಎನ್ನುತ್ತಿದ್ದಾರೆ.
ಇಂತಹ ಖಾದ್ಯಗಳು ಫೇಮಸ್ ಆಗಿದ್ದರೂ, ಬಗೆಬಗೆಯ ಫುಡ್ ಕಾಂಬಿನೇಷನ್ ಕುರಿತಾಗಿ ಆಹಾರ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ, ವೈವಿಧ್ಯಮಯ ಆಹಾರಗಳನ್ನು ನೋಡಬೇಕು, ಆದರೆ ಅದನ್ನು ಸವಿಯಲು ಸ್ವಲ್ಪ ಯೋಚಿಸುವುದು ಉತ್ತಮ.