ನವದೆಹಲಿ: ಜೂನ್ 29ರಂದು ಮುಕ್ತಾಯಗೊಂಡ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆಗಳಾಗಿದ್ದು, ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ್ದು, ಮಹತ್ವದ ಬೆಳವಣಿಗೆಯಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಮಾದರಿಗೆ ನೂತನ ನಾಯಕರಾಗಿ ನೇಮಕವಾಗಿದ್ದಾರೆ.
ಸೂರ್ಯಕುಮಾರ್ಗೂ ಮೊದಲು ಟಿ20 ಮಾದರಿಗೆ ನಾಯಕನಾಗಿ ಹಾರ್ದಿಕ್ ಪಾಂಡ್ಯ ನೇಮಕಗೊಳ್ಳುವುದು ಬಹತೇಕ ಪಕ್ಕಾ ಆಗಿತ್ತು. ಆದರೆ, ನೂತನ ಕೋಚ್ ಗೌತಮ್ ಗಂಭೀರ್ ನೇಮಕವಾದ ಬಳಿಕ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸೂರ್ಯಕುಮಾರ್ರನ್ನು ನೇಮಿಸಲಾಗಿತ್ತು. ಸೂರ್ಯಕುಮಾರ್ ಯಾದವ್ ಕಾಯಂ ನಾಯಕನಾಗಿ ಮುಂದುಬರೆಯಲಿದ್ದಾರೆ ಎಂದು ಹೇಳಲಾಗಿದ್ದು, ಇದೆಲ್ಲದರ ನಡುವೇ ಹಾರ್ದುಕ್ ಪಾಂಡ್ಯ ಟಿ20 ಮಾದರಿಗೆ ನಾಯಕನಾಗಲಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿದ್ದು, ಈ ಬಗ್ಗೆ ಕ್ರೀಡಾ ವಿಶ್ಲೇಷಕ ಹರ್ಷ ಭೋಗ್ಲೆ ನೀಡಿರುವ ಹೇಳಿಕೆ ಸಖತ್ ಟ್ರೆಂಡ್ ಆಗುತ್ತಿದೆ.
ಇದನ್ನೂ ಓದಿ: VIDEO| ಹೆದ್ದಾರಿಯಲ್ಲಿ ಅಪಾಯಕಾರಿ ವ್ಹೀಲಿಂಗ್; ಬ್ರಿಡ್ಜ್ನಿಂದ ಬೈಕ್ ಕೆಳಗೆಸೆದ ಸಾರ್ವಜನಿಕರು!
ಖಾಸಗಿ ಸುದ್ದಿ ವಾಹಿನಿಯಲ್ಲಿ ಈ ಕುರಿತು ಮಾತನಾಡಿರುವ ಹರ್ಷಭೋಗ್ಲೆ, ಬಿಸಿಸಿಐ ರ್ದಿಕ್ ಪಾಂಡ್ಯ ಮತ್ತೆ ಟಿ20 ತಂಡದ ನಾಯಕನನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ. ಏಕೆಂದರೆ ಬಿಸಿಸಿಐ ಮ್ಯಾನೇಜ್ಮೆಂಟ್ ಪಾಂಡ್ಯರನ್ನು ವೈಟ್ಬಾಲ್ ಕ್ರಿಕೆಟ್ನಲ್ಲಿ ಹೆಚ್ಚು ಆಡಿಸಲು ಚಿಂತಿಸಿದ್ದು, ಟಿ20 ಮಾದರಿಗೆ ಹಾರ್ದಿಕ್ ಮತ್ತೆ ನಾಯಕನಾಗಿ ನೇಮಕವಾಗಬಹುದು ಎಂದು ಹೇಳಲಾಗಿದೆ. ಆಡಳಿತ ಮಂಡಳಿಯು ಸೂರ್ಯಕುಮಾರ್ ಯಾದವ್ಗೆ ಪರೀಕ್ಷಾರ್ಥವಾಗಿ ಟಿ20 ತಂಡದ ನಾಯಕತ್ವ ನೀಡಿದೆ. ಒಮ್ಮೆ ಹಾರ್ದಿಕ್ ಪಾಂಡ್ಯ ಸೀಮಿತ ಓವರ್‌ಗಳಲ್ಲಿ ತನ್ನ ಫಿಟ್ನೆಸ್ ಸಾಬೀತು ಮಾಡಿದರೆ , ಅವರಿಗೆ ಸೀಮಿತ ಓವರ್ಗಳ ನಾಯಕತ್ವ ನೀಡುವುದು ಖಚಿತ ಎಂದು ಹರ್ಷ ಭೋಗ್ಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರ್ಷ ಭೋಗ್ಲೆ ಅವರ ಈ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಫಿಟ್ನೆಸ್ ಸಾಬೀತುಪಡಿಸುವ ದೊಡ್ಡ ಸವಾಲು ಹಾರ್ದಿಕ್ ಪಾಂಡ್ಯ ಅವರ ಮುಂದಿದೆ. ಹರ್ಷ ಭೋಗ್ಲೆ ಅವರ ಹೇಳಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ ಲಂಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಸೂರ್ಯನಿಗೆ ನಾಯಕತ್ವ ನೀಡುವುದರ ಬಗ್ಗೆ ಮಾತನಾಡಿದ್ದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಟಿ20 ನಾಯಕತ್ವಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆ. ಅವರು ತಮ್ಮ ಪ್ರತಿಭೆಯನ್ನು ಈಗಾಗಲೇ ತೋರಿಸಿದ್ದಾರೆ ಎಂದು ಹೇಳಿದ್ದರು.