ಕೊಕ್ಕರ್ಣೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರುಗೊಳಿಸಲಾದ ಮಾಸಾಶನ ಮಂಜೂರಾತಿ ಪತ್ರವನ್ನು ಬ್ರಹ್ಮಾವರ ಬಾರ್ಕೂರು ವಲಯ ನಡೂರು ಕಾರ್ಯಕ್ಷೇತ್ರದ ನರಸಿಂಹ ಆಚಾರ್ಯ ಅವರಿಗೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಲಂಧರ್ ಶೆಟ್ಟಿ ಹಾಗೂ ಯೋಜನಾಧಿಕಾರಿ ರಮೇಶ್ ಪಿ.ಕೆ ಹಸ್ತಾಂತರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರುಂಗ ಶೆಟ್ಟಿ, ಸಂಘದ ಸದಸ್ಯ ನಾರಾಯಣ, ನೇತ್ರಾವತಿ, ರತ್ನ, ವಲಯದ ಮೇಲ್ವಿಚಾರಕ ರವೀಂದ್ರ, ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪುಷ್ಪಲತಾ, ಸೇವಾಪ್ರತಿನಿಧಿ ಚೈತ್ರಾ ಉಪಸ್ಥಿತರಿದ್ದರು.