ಕಾರ್ಗಿಲ್ ವಿಜಯ ದಿನ, ನಿವೃತ್ತ ಸೈನಿಕರಿಗೆ ಗೌರವ

soldir
ಕಾರ್ಗಿಲ್ ವಿಜಯೋತ್ಸವ
Published on

ಕೊಕ್ಕರ್ಣೆ: ಬ್ರಹ್ಮಾವರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು, ಲಯನ್ಸ್ ಕ್ಲಬ್, ಜಯಂಟ್ಸ್ ಗ್ರೂಪ್ ಹಾಗೂ ಜನೌಷಧ ಕೇಂದ್ರ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾಲೇಜು ಸಭಾಂಗಣದಲ್ಲಿ ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಮೇ.ರಾಧಾಕೃಷ್ಣ ಎಂ, ಕಾರ್ಗಿಲ್ ಯೋಧರ ಶೌರ್ಯ ಮತ್ತು ಭಾರತೀಯ ಸೇನೆಯಲ್ಲಿರುವ ಹುದ್ದೆ ಬಗ್ಗೆ ಮತ್ತು ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಬಳಿಕ ಪ್ರೊಫೆಸರ್ ಮೇಜರ್ ರಾಧಾಕೃಷ್ಣ ಎಂ, ನಿವೃತ್ತ ಸೈನಿಕರಾದ ಭೂಸೇನೆಯ ಜಯರಾಮ್ ಶೆಟ್ಟಿ, ಬಿಎಸ್‌ಎಫ್‌ನ ರಿಚರ್ಡ್ ಫರ್ನಾಂಡಿಸ್, ವಾಯುದಳದ ಸ್ಟೀವನ್ ಡಿಸಿಲ್ವ ಅವರನ್ನು ಸನ್ಮಾನಿಸಲಾಯಿತು. ಎಸ್‌ಸಿಸಿ ಅಧಿಕಾರಿ ಜಿ.ಬಾಲಕೃಷ್ಣ ಶೆಟ್ಟಿ ಮತ್ತು ಸೆಕೆಂಡ್ ಆಫೀಸರ್ ವಿಷ್ಣುದಾಸ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು.

ಪ್ರಾಂಶುಪಾಲ ಐವನ್ ದೊನಾತ್ ಸುವಾರಿಸ್ ಸ್ವಾಗತಿಸಿದರು. ಲಯನ್ಸ್ ಅಧ್ಯಕ್ಷ ಎಸ್.ಜಯರಾಮ್ ನಾಯಕ್, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಜಯಂಟ್ಸ್ ಸಲಹಾ ಅಧಿಕಾರಿ ಮಧುಸೂಧನ ಹೇರೂರು, ಜಯಂಟ್ಸ್ ವಲಯ ಅಧಿಕಾರಿ ವಿಕ್ರಂ ಕಾಮತ್, ಕಾರ್ಯದರ್ಶಿ ಮಿಲ್ಟನ್ ಓಲಿವೆರಾ ಉಪಸ್ಥಿತರಿದ್ದರು. ಉಪನ್ಯಾಸಕ ಸೀಸರ್ ಗೊನ್ಸಾಲ್ವಿಸ್ ವಂದಿಸಿದರು. ಸಂತೋಷ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net