ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಸಮಾಜದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ತುಂಬಾ ಇದೆ. ನಾಯಕತ್ವ ಗುಣ ಕಲಿಕಾ ಹಂತದಲ್ಲಿ ಬೆಳೆಯಲು ಇಂಟರಾಕ್ಟ್ ಸಹಕಾರಿ ಎಂದು ಜಿಲ್ಲಾ ಇಂಟರಾಕ್ಟ್ ಚೇರ್ಮನ್ ಕೃಷ್ಣ ಕಾಂಚನ್ ಹೇಳಿದರು. ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಸಾಹೇಬರಕಟ್ಟೆ ಅಂಗ ಸಂಸ್ಥೆ ಇಂಟರ‌್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿಯಾಗಿ ಈ ಸಂಸ್ಥೆ ವಿದ್ಯಾರ್ಥಿ ಪ್ರತಿನಿಧಿಯಾಗಿರುವುದು ಹೆಮ್ಮೆಯ ವಿಷಯ ಎಂದು ಅಧ್ಯಕ್ಷೆ ಪವಿತ್ರಾ ಅಭಿನಂದಿಸಿದರು.
ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಈ ಬಾರಿಯ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆ ವಿದ್ಯಾರ್ಥಿಮಿತ್ರ ಪ್ರತಿಗಳನ್ನು ರೋಟರಿ ಸದಸ್ಯ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಎಂ.ರವೀಂದ್ರನಾಥ್ ಕಿಣಿ ವಿತರಿಸಿದರು. ರೋಟರಿ ಕ್ಲಬ್ ಸಾಹೇಬರಕಟ್ಟೆ ಅಧ್ಯಕ್ಷ ರಾಮ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯಕ್, ಕ್ಲಬ್ ಕಾರ್ಯದರ್ಶಿ ಪ್ರಶಾಂತ್ ಜೋಗಿ ಪೂಜಾರಿ, ಮಧುವನ ಗಣೇಶ್ ನಾಯಕ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಸಾದ್ ಭಟ್ ಉಪಸ್ಥಿತರಿದ್ದರು. ಶ್ರೀನಿ ಹೆಗ್ಡೆ ನಿರೂಪಿಸಿದರು.