

ಕುಂದಾಪುರ: ಅಂಗನವಾಡಿಗಳಿಗೆ ಅಗತ್ಯವಿರುವ ವಸ್ತುಗಳಲ್ಲಿ ಕೆಲವೊಂದನ್ನು ಪುರಸಭೆ ವತಿಯಿಂದ ನೀಡಲಾಗುತ್ತಿದೆ. ಕೆಲವೊಂದನ್ನು ದಾನಿಗಳ ಮೂಲಕ ಸಂಗ್ರಹಿಸಿ ಕೊಡಲಾಗುತ್ತಿದೆ. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಬೇಕಾದ ಪೂರಕ ಕೆಲಸಗಳನ್ನು ವಾಡಲಾಗುತ್ತಿದೆ. ಅಂಗನವಾಡಿಗಳಿಗೆ ದಾನಿಗಳ ಮೂಲಕ ಕಪಾಟು ಮೊದಲಾದವುಗಳನ್ನು ನೀಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು.
ಪುರಸಭೆ ವ್ಯಾಪ್ತಿಯ 18 ಅಂಗನವಾಡಿಗಳಿಗೆ ಎಸ್.ಶಿವರಾಮ ಹೆಗ್ಡೆ ಅವರು ನೀಡಿದ ಕಪಾಟು, ಡ್ರಮ್ ಇತ್ಯಾದಿಗಳ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್ ಮಾತನಾಡಿ, ಅಂಗನವಾಡಿಗಳು ಮಕ್ಕಳ ಶಿಕ್ಷಣಕ್ಕೆ ಉತ್ತಮ ತಳಪಾಯ ಎಂದರು.
ಸೌತ್ ಫೀಲ್ಡ್ ಪೈಂಟ್ ಸಂಸ್ಥೆ ಸಂಸ್ಥಾಪಕ ಎಸ್.ಶಿವರಾಮ ಹೆಗ್ಡೆ, ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಪುರಸಭೆ ಮ್ಯಾನೇಜರ್ ಸೂರ್ಯಕಾಂತ್ ಉಪಸ್ಥಿತರಿದ್ದರು. ಗಣೇಶ್ ಜನ್ನಾಡಿ ನಿರೂಪಿಸಿದರು.