More

    ಈ ಎಲ್ಲಾ ಷಡ್ಯಂತ್ರ ಅವರಿಬ್ಬರದ್ದೇ … ಸುಶಾಂತ್​ ಜಿಮ್​ ಪಾರ್ಟ್ನರ್​

    ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ರಹಸ್ಯವನ್ನು ಬೇಧಿಸುವುದಕ್ಕೆ ಸಿಬಿಐ ಹೊರಟಿದೆ. ಪ್ರತಿ ದಿನ ಈ ಕೇಸ್​ನ ವಿಚಾರವಾಗಿ ಒಂದಲ್ಲಾ ಒಂದು ಹೊಸ ಸುದ್ದಿ ಬರುತ್ತಲೇ ಇದೆ.

    ಇದನ್ನೂ ಓದಿ: ಓಟಿಟಿ ಮಡಿಲಿಗೆ ಧನುಷ್​ ‘ಜಗಮೇ ತಂಧೀರಮ್’?

    ಹೀಗಿರುವಾಗಲೇ, ಸುಶಾಂತ್​ ಸಾವಿಗೆ ಹಿರಿಯ ನಿರ್ದೇಶಕ ಮಹೇಶ್​​ ಭಟ್​ ಮತ್ತು ರಿಯಾ ಚಕ್ರವರ್ತಿ ಅವರ ತಂದೆಯೇ ಕಾರಣ ಎಂದು ಸುನೀಲ್​ ಶುಕ್ಲಾ ಹೇಳಿಕೊಂಡಿದ್ದಾರೆ. ಈ ಸುನೀಲ್​, ಸುಶಾಂತ್​ ಅವರ ಜಿಮ್​ ಪಾರ್ಟ್ನರ್​ ಅಂತೆ. ಸುಶಾಂತ್​ ಅವರನ್ನು ಬಹಳ ಹತ್ತಿರದಿಂದ ನೋಡಿರುವ ಅವರು, ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

    ‘ಸುಶಾಂತ್​ ಅವರ ಸಾವಿಗೆ ಮಹೇಶ್​ ಭಟ್​ ಮತ್ತು ರಿಯಾ ಚಕ್ರವರ್ತಿ ಅವರ ತಂದೆಯೇ ಕಾರಣ. ಸುಶಾಂತ್​ ಅವರಿಗೆ ರಿಯಾ ತಂದೆ ಅದೇನೋ ಔಷಧಿಗಳನ್ನು ಕೊಡುತ್ತಿದ್ದರು. ಅದನ್ನು ಮಗಳ ಮೂಲಕವೇ ಕೊಡಿಸುತ್ತಿದ್ದರು. ಆಕೆ ಮನೆ ಬಿಟ್ಟು ಹೊರಬಂದ ಮೇಲೆ, ಬೇರೆ ಯಾರಿಂದಲೋ ಕೊಡಿಸುತ್ತಿದ್ದರು’ ಎಂದು ಗುಮಾನಿ ವ್ಯಕ್ತಪಡಿಸಿದ್ದಾರೆ.

    ಇನ್ನು ಸುಶಾಂತ್​ ಅವರಿಗೆ ಡಿಪ್ರೆಶನ್​ ಇತ್ತು ಎಂಬುದನ್ನು ತಳ್ಳಿಹಾಕಿರುವ ಅವರು, ‘ಸುಶಾಂತ್​ಗೆ ಡಿಪ್ರೆಶನ್​ ಇರಲಿಲ್ಲ. ಬಹಳ ಚೆನ್ನಾಗಿಯೇ ಇದ್ದರು. ಆದರೆ, ಅವರಿಗೆ ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದ ನೆಗೆಟಿವ್​ ವರದಿಗಳ ಬಗ್ಗೆ ಬಹಳ ಬೇಸರವಿತ್ತು. ಆ ಬಗ್ಗೆ ಅವರು ಆಗಾಗ ಬೇಸರ ವ್ಯಕ್ತಪಡಿಸಿದ್ದು ಬಿಟ್ಟರೆ, ಮಿಕ್ಕಂತೆ ಅವರಿಗೆ ಬೇರೆ ಯಾವ ಸಮಸ್ಯೆಯೂ ಇರಲಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ತೀವ್ರ ವಿರೋಧದ ಬೆನ್ನಲ್ಲೇ ಕೋಲುಮಂಡೆ ರ‍್ಯಾಪ್​ ಸಾಂಗ್ ಯೂಟ್ಯೂಬ್​ನಿಂದ ನಾಪತ್ತೆ!

    ಸುಶಾಂತ್​ ಯಾವಾಗಲೂ ಫಿಟ್​ ಆಗಿದ್ದರು ಎಂದು ಹೇಳಿಕೊಂಡಿರುವ ಸುನೀಲ್​, ‘ಸುಶಾಂತ್​ ಅದೆಷ್ಟು ಫಿಟ್​ ಆಗಿದ್ದರು ಎಂದರೆ, ಸತತವಾಗಿ ನಾಲ್ಕು ಗಂಟೆ ಆಟ ಆಡುತ್ತಿದ್ದರು. ಅರ್ಧ ಗಂಟೆ ರೆಸ್ಟ್​ ಬಳಿಕ ಮತ್ತೆ ಆಡುತ್ತಿದ್ದರು. ಅವರು ತುಂಬಾ ಓದುತ್ತಿದ್ದರು, ನಮ್ಮನ್ನೆಲ್ಲಾ ಸ್ಫೂರ್ತಿಗೊಳಿಸುತ್ತಿದ್ದರು. ತುಂಬಾ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು. ಅವರಿಗೆ ಡಿಪ್ರೆಶನ್​ ಇತ್ತು ಎಂಬುದು ನನ್ನಿಂದ ನಂಬಲು ಸಾಧ್ಯವಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

    ಬಣ್ಣ ಹಚ್ಚೋಕೆ ರೋಜಾ ರೆಡಿಯಂತೆ … ಆದರೆ, ಒಂದು ಕಂಡೀಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts