

ಬ್ರಹ್ಮಾವರ: ಬ್ರಹ್ಮಾವರ ಗಾಂಧಿಮೈದಾನದಲ್ಲಿ ರಾಶಿ ಬಿದ್ದ ಗುಜರಿ ಸಾಮಗ್ರಿ ಹಾಗೂ ಕಾನೂನು ಬಾಹಿರ ಚಟುವಟಿಕೆ ಮತ್ತು ಅಧರ್ಕ್ಕೆ ನಿಂತ ಕಾಮಗಾರಿ ಕುರಿತು ವಿಜಯವಾಣಿಯಲ್ಲಿ ‘ಅಕ್ರಮಕ್ಕುಂಟು ಆಟಕ್ಕಿಲ್ಲ ಮೈದಾನ’ ವರದಿ ಸೋಮವಾರ ಪ್ರಕಟಗೊಂಡಿತ್ತು. ವರದಿಗೆ ಎಚ್ಚೆತ್ತು ಮೈದಾನದ ತ್ಯಾಜ್ಯ ತೆರವುಗೊಳಿಸಿ ಕ್ರೀಡೆಗಳಿಗೆ ಅನುಕೂಲವಾಗಲಿದೆ.