ಹೆಬ್ರಿ: ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಕಾರ್ಯಕ್ರಮ ಯಶಸ್ವಿಗೊಳಿಸೋಣ. ಕಡಿಮೆ ಸಮಯದಲ್ಲಿ ಜೀರ್ಣೋದ್ಧಾರ ನಡೆದು, ಸಮುದಾಯಕ್ಕೆ ಹಸ್ತಾಂತರ ಆಗಬೇಕು ಎಂದು ಕೊರತಿ-ಕೊರಗಜ್ಜ ದೈವ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ನಾಯಕ್ ಹೇಳಿದರು.
ಹೆಬ್ರಿಯಲ್ಲಿ ಇತ್ತೀಚೆಗೆ ಕೊರತಿ-ಕೊರಗಜ್ಜ ದೈವಸ್ಥಾನದ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಗೌರವಾಧ್ಯಕ್ಷ ನಾಗರಾಜ್ ಜೋಯಿಸ್, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ದನ್, ಆಡಳಿತ ಮಂಡಳಿ ಅಧ್ಯಕ್ಷ ಜನಾರ್ದನ್ ಬಡಾಗುಡ್ಡೆ, ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್.ಬಂಗೇರ, ಪ್ರಮುಖರಾದ ಸುಧಾಕರ್ ಹೆಗ್ಡೆ, ಶ್ರೀಕಾಂತ್ ಪೂಜಾರಿ ಕುಚ್ಚೂರು, ಸಮುದಾಯ ಬಾಂಧವರು, ಸದಸ್ಯರು ಉಪಸ್ಥಿತರಿದ್ದರು.