ಆರ್ಡಿ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮಂಗಳೂರು ವಿಜಯ ಗ್ರಾಮೀಣ ಪ್ರತಿಷ್ಠಾನ, ಗ್ರಾಮ ಪಂಚಾಯಿತಿ ಮಡಾಮಕ್ಕಿ, ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಏಳು ದಿನಗಳ ಟೈಲರಿಂಗ್ ಮತ್ತು ಫ್ಯಾಷನ್ ಬ್ಲೌಸ್ ತರಬೇತಿ ಕಾರ್ಯಾಗಾರಕ್ಕೆ ಮಡಾಮಕ್ಕಿ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಚಾಲನೆ ದೊರೆಯಿತು. ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು.
ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಶೇಡಿಮನೆ ಅಧ್ಯಕ್ಷತೆ ವಹಿಸಿದರು. ಬ್ಯಾಂಕ್ ಆಫ್ ಬರೋಡಾ ಆರ್ಡಿ ಶಾಖೆ ಸಹವ್ಯವಸ್ಥಾಪಕ ಸ್ವಾಮಿ, ಪ್ರಮುಖರಾದ ರಾಘವೇಂದ್ರ ಆಚಾರ್ಯ ಕೆದೂರು, ಉಮಾ, ವೀಣಾ ಹೆಗ್ಡೆ, ರಿತೇಶ್ ಪುತ್ರನ್, ನಿಶಾ ಅಣ್ಣಪ್ಪ, ಕಾರ್ತಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪೂರ್ಣಿಮಾ ಪ್ರಾರ್ಥಿಸಿದರು. ಪ್ರತಿಮಾ ಪ್ರಸ್ತಾವನೆಗೈದರು. ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.