ಶ್ವಾನಕ್ಕೆ ಮನಸೋಇಚ್ಛೆ ಥಳಿತ; ಇಬ್ಬರು ಅರೆಸ್ಟ್​

Vetic Pet Clinic
Published on

ಮುಂಬೈ: ಗ್ರೂಮಿಂಗ್​ಗಾಗಿ ಬಿಡಲಾಗಿದ್ದ ಶ್ವಾನದ ಮೇಲೆ ಪೆಟ್​ ಕ್ಲಿನಿಕ್​ನ ಸಿಬ್ಬಮದಿ ಅಂಆನುಷವಾಗಿ ಹಲ್ಲೆ ನಡೆಸಿ ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಥಾಣೆಯ ಆರ್​ ಮಾಲ್​ ಬಳಿ ಇರುವ ವೆಟಿಕ್​ ಪೆಟ್​ ಕ್ಲಿನಿಕ್​ ಬಳಿ ಈ ಘಟನೆ ನಡೆದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವೆಟಿಕ್​ ಪೆಟ್​ ಕ್ಲಿನಿಕ್​ನ ಸಿಬ್ಬಂದಿ ನಾಯಿಯನ್ನು ಮನಸೋಇಚ್ಛೆ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿರುವ ಮತ್ತೋರ್ವ ಸಿಬ್ಬಂದಿ ಆತನಿಗೆ ಮತ್ತಷ್ಟು ಪ್ರೋತ್ಸಾಹ ನೀಡವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಮತೆ ಬಾಲಿವುಡ್​ನ ಸೆಲೆಬ್ರಿಟಿಗಳು ಹಾಗೂ ಪ್ರಾಣಿಪ್ರಿಯರು ಆಕ್ರೋಶವನ್ನು ಹೊರಹಾಕಿದ್ದರು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಇತ್ತ ವೈರಲ್​ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ವೆಟಿಕ್​ ಪೆಟ್​​ ಕ್ಲಿನಿಕ್​ನ ವಕ್ತಾರ, ವಿಚಾರ ತಿಳಿಯುತ್ತಿದ್ದಂತೆ ಇಬ್ಬರು ಸಿಬ್ಬಂದಿಯನ್ನು ವಜಾಗೊಳಿಸಲಾಗಿದ್ದು, ಹೀನಾಯ ಕೃತ್ಯವನ್ನು ಕಂಡು ನಮಗೆ ಆಘಾತ ಉಂಟಾಗಿದ್ದು, ಕ್ಷಮೆಯಾಚಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಮಹಾರಾಷ್ಟ್ರದ ವಿವಿಧೆಡೆ ಪ್ರಾಣಿಪ್ರಿಯರು ದೂರು ದಾಖಲಿಸಿದ್ದು, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net