More

    ಮದುವೆಯಾಗಲು ಬಂದು ಫಜೀತಿಗೆ ಸಿಕ್ಕ ವರ, ವಧುವಿನ ಮನೆಯವರು ಸಿಟ್ಟಾಗಿದ್ದು ಈ ಕಾರಣಕ್ಕೆ…

    ಗಯಾ: ತನ್ನ ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ ವರನೊಬ್ಬನಿಗೆ ಮದುವೆ ಮನೆಯಲ್ಲಿಯೇ ಥಳಿಸಿರುವ ವಿಚಿತ್ರ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.

    ಇದನ್ನೂ ಓದಿ: ಪ್ರಸ್ತುತ ರಾಜಕಾರಣ ಐಪಿಎಲ್​ನಂತಾಗಿದೆ, ಯಾರು ಯಾವ ಕಡೆ ಆಡುತ್ತಿದ್ದಾರೋ ಯಾರಿಗೂ ತಿಳಿದಿಲ್ಲ: ಮಹಾರಾಷ್ಟ್ರ ಮಾಜಿ ಸಿಎಂ

    ಕೊತ್ವಾಲಿ ಪೊಲೀಸ್ ಠಾಣೆಯ ಇಕ್ಬಾಲ್ ನಗರದ ನಿವಾಸಿಯಾಗಿರುವ ವ್ಯಕ್ತಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈತ ತನ್ನ ಮೊದಲ ಹೆಂಡತಿ ಜೀವಂತವಾಗಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ್ದಾನೆ. ಸುದ್ದಿ ತಿಳಿದ ಪತ್ನಿ ಹಾಗೂ ಸಂಬಂಧಿಕರು ಸ್ಥಳಕ್ಕಾಗಮಿಸಿದ್ದ ಕೂಡಲೇ ಬಾಲಕಿಯ ಕುಟುಂಬಸ್ಥರಿಗೆ ಆತನಿಗೆ ಥಳಿಸಿದ್ದಾರೆ.

    ಈ ವೇಳೆ ಅಲ್ಲಿಯೇ ನೆರೆದಿದ್ದ ವ್ಯಕ್ತಿಯೊಬ್ಬ, ವರನ ತಲೆ ಬೋಳಿಸಲು ಉಪಾಯವನ್ನು ನೀಡಿದ್ದಾನೆ. ಕೂಡಲೇ ಜನರು ಕ್ಷೌರಿಕನಿಗ ಬರಲು ಹೇಳಿದ್ದಾರೆ. ಈ ವೇಳೆ ವರನು ತನ್ನನ್ನು ಬಿಡುವಂತೆ ಪರಿಪರಿಯಾಗಿ ನೆರೆದವರಿಗೆ ಕೇಳಿಕೊಂಡಿದ್ದಾನೆ. ಆದರೆ ಜನರು ಈತನ ಮಾತನ್ನು ನಿರ್ಲಕ್ಷಿಸಿದ್ದು, ಕ್ಷೌರಿಕ ವರನ ತಲೆಗೂದಲು ಕತ್ತರಿಸಲು ಮುಂದಾಗಿದ್ದಾನೆ.

    ಇದನ್ನೂ ಓದಿ: ಸಮೋಸಾ ಆರ್ಡರ್ ಮಾಡಲು ಹೋಗಿ 1.40 ಲಕ್ಷ ರೂ. ಕಳೆದುಕೊಂಡ ವೈದ್ಯ

    ಈ ವೇಳೆ ವರನು ಧರಿಸಿದ್ದ ವಿಗ್​​​ ಕಿತ್ತು ಕ್ಷೌರಿಕನ ಕೈಗೆ ಬಂದಿದೆ. ಕೂಡಲೇ ಬಾಲಕಿಯ ಮನೆಯವರ ಸಿಟ್ಟು ನೆತ್ತಿಗೇರಿದ್ದು ವರನಿಗೆ ಮತ್ತೆ ಧರ್ಮದೇಟು ನೀಡಿದ್ದಾರೆ. ವರನ ಕಷ್ಟದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ ದೋಭಿ ಪೊಲೀಸ್ ಠಾಣೆ ಮತ್ತು ಕೊತ್ವಾಲಿ ಪೊಲೀಸ್ ಠಾಣೆ ಇಂತಹ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts