ಬೆಂಗಳೂರು: ತಮ್ಮ ಹಳೆಯ ಮತ್ತು ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಸಂತೋಷ ವಿಭಿನ್ನವಾಗಿದೆ. ಇಂತಹದೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರ ಮನ ಮುಟ್ಟುತ್ತಿದೆ.
ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿರುವ ಅನೀಶ್ ಭಗತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?: ಅನೀಶ್ ಅವರ ಅಜ್ಜಿ ಶ್ವಾಸಕೋಶದ ಕಾಯಿಲೆಯಿಂದ ತುಂಬಾ ತೊಂದರೆಗೀಡಾಗಿದ್ದಾರೆ. ಈ ಕಾರಣಕ್ಕಾಗಿ ಅವರು ಅಜ್ಜಿಯ ಕೊನೆಯ ಆಸೆಗಳ ಪಟ್ಟಿಯನ್ನು ಮಾಡುತ್ತಾನೆ. ತನ್ನ ಸ್ನೇಹಿತರನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂಬುದೇ ಆಕೆಯ ಇಚ್ಛೆಯ ಪಟ್ಟಿಯಲ್ಲಿರುವ ಒಂದು ಆಸೆ. ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಗೆ ಖುಷಿ ನೀಡುವ ಉದ್ದೇಶದಿಂದ ಅನೀಶ್ ತನ್ನ ಅಜ್ಜಿಯ ಬಾಲ್ಯದ ಗೆಳೆಯರನ್ನು ಭೇಟಿ ಮಾಡಲು ಯೋಚಿಸುತ್ತಿದ್ದನು. ಅಜ್ಜಿಯ ಸ್ನೇಹಿತೆಯರಿಗೆ ಕರೆ ಮಾಡಿ ಅವರು ಇರುವ ಸ್ಥಳದ ಮಾಹಿತಿಯನ್ನು ಕಲೆ ಹಾಕುತ್ತಾನೆ.
ಅನೀಶ್ ತನ್ನ ಅಜ್ಜಿಯೊಂದಿಗೆ ಬೆಂಗಳೂರಿಗೆ ಬಂದು ಮನೆಯೊಂದರ ಹೊರಗೆ ನಿಂತು ಬೆಲ್ ಬಾರಿಸುತ್ತಿರುವುದನ್ನು ಕಾಣಬಹುದು. ನಾವು ಯಾಕೆ ಇಲ್ಲಿಗೆ ಬಂದಿದ್ದೇವೆ ಎಂದು ಅಜ್ಜಿ ಮೊಮ್ಮಗನ ಬಳಿ ಕೇಳುತ್ತಾಳೆ. ಅಷ್ಟರಲ್ಲಿ ಅಜ್ಜಿಯ ಆತ್ಮೀಯ ಗೆಳೆತಿ ಮನೆಯ ಬಾಗಿಲು ತೆರೆಯುತ್ತಾಳೆ. ಅಜ್ಜಿ ಆತ್ಮೀಯ ಸ್ನೇಹಿತೆ ನೋಡಿ ಗುರುತಿಸದಿದ್ದರೂ ಗೆಳೆಯರ ಮುಖ ನೆನಪಾದ ಕೂಡಲೇ ಬೆಚ್ಚಿ ಬೀಳುತ್ತಾಳೆ. ಈ ಸಮಯದಲ್ಲಿ, ಅವರ ಮುಖದಲ್ಲಿ ಸಂತೋಷ ಮೂಡುತ್ತದೆ. ನಾನಿ ತನ್ನ ಬಾಲ್ಯದ ಸ್ನೇಹಿತರನ್ನು ನೋಡಿ ಭಾವುಕಳಾಗುತ್ತಾಳೆ. ನಂತರ ವಿಡಿಯೋದಲ್ಲಿ ಎಲ್ಲರೂ ಒಟ್ಟಿಗೆ ಮಾತನಾಡುತ್ತಿರುವುದು ಕಂಡು ಬಂದಿದೆ.
50 ವರ್ಷಗಳ ನಂತರ ಸ್ನೇಹಿತರನ್ನು ಕಂಡರೆ ಯಾರಾದರೂ ಆಶ್ಚರ್ಯ ಪಡುತ್ತಾರೆ ಎಂಬುದು ಸ್ಪಷ್ಟವಾಗಿದೆ. ಮೂರು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ಭಾವನಾತ್ಮಕ ವೀಡಿಯೊವನ್ನು ಇದುವರೆಗೆ 8 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು 17 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ ನೋಡಿದ ಅದೆಷ್ಟೋ ಮಂದಿ ಸ್ನೇಹಿತೆಯರು ನಾವು ಮುಂದೆ ಒಂದು ದಿನ ಹೀಗೆ ಭೇಟಿಯಾಗೋಣ ಎಂದು ಕಾಮೆಂಟ್ ಮಾಡುತ್ತಿದ್ದಾರೆ.