ನೀರಜ್ ಚೋಪ್ರಾ ಫೋನ್ ನಂಬರ್ ಕೇಳಿದ ಯುವತಿ! ಮನುಭಾಕರ್​ಗೆ ಈ ವಿಷಯ ಗೊತ್ತಾ? ಎಂದ್ರು ನೆಟ್ಟಿಗರು

neeraj chopra
Published on

ನವದೆಹಲಿ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ.  ನೀರಜ್​​  ಎಲ್ಲಿ ಕಂಡರೂ ಸೆಲ್ಫಿ, ಆಟೋಗ್ರಾಫ್‌ಗಾಗಿ ಅಭಿಮಾನಿಗಳುಕಾಯುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ನೀರಜ್ ಜೊತೆ ಇಬ್ಬರು ಮಹಿಳೆಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡ ನಂತರ ನಿಮ್ಮ ಫೋನ್ ನಂಬರ್​ ನನಗೆ ಕೊಡುತ್ತೀರಾ? ಎಂದು ಯುವತಿ  ನೀರಜ್‌ನನ್ನು ಕೇಳಿದಳು. ನೀರಜ್ ಈ ಅನಿರೀಕ್ಷಿತ ಪ್ರಶ್ನೆಯಿಂದ ಸ್ವಲ್ಪ ಗೊಂದಲಕ್ಕೊಳಗಾದರು ಮತ್ತು ನಂತರ ನಿಧಾನವಾಗಿ ಪ್ರಶ್ನೆಯನ್ನು ಬಿಟ್ಟು ನಗುತ್ತಾ ಮುಂದೆ ಸಾಗುತ್ತಾರೆ. ಈ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಇದು ಯಾವಾಗ ಮತ್ತು ಎಲ್ಲಿ ಸಂಭವಿಸಿತು ಎಂಬುದು ತಿಳಿದಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ನೆಟಿಜನ್‌ಗಳು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಸಂದರ್ಭದಲ್ಲಿ ನಡೆದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ವಿಷಯ ಶೂಟರ್ ಮನು ಭಾಕರ್ ಗೆ ತಿಳಿದರೆ ಚೆನ್ನಾಗಿತ್ತು  ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

 ಒಲಿಂಪಿಕ್ಸ್ ವೇಳೆ ನೀರಜ್ ಮತ್ತು ಮನು ಹತ್ತಿರವಾಗಿದ್ದರು ಮತ್ತು ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳು ಬಂದಿದ್ದವು.  ನೀರಜ್ ಮತ್ತು ಮನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಹಬ್ಬಿತ್ತು. ಈ ಹಿಂದೆ ಮನು ಭಾಕರ್ ಪ್ರತಿಕ್ರಿಯೆ ನೀಡಿದ್ರು.. ಹಾಗಂತ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನೀರಜ್ ಬಗ್ಗೆ ಮಾತನಾಡುತ್ತಾ, ಅವರು ಒಬ್ಬ ಮಹಾನ್ ವ್ಯಕ್ತಿ ಮತ್ತು ಅನೇಕ ಜನರಿಗೆ ಸ್ಫೂರ್ತಿ ಎಂದು ಹೊಗಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net