

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಪ್ರಗತಿಯಲ್ಲಿದ್ದು, ಕೆಲವೆಡೆ ಸಣ್ಣಪುಟ್ಟ ಲೋಪದೋಷಗಳ ಕಾರಣಕ್ಕೆ ಮತದಾನ ವಿಳಂಬವಾಗಿದೆ. ಇನ್ನು ಕೆಲವೆಡೆ, ಮತಪತ್ರಗಳಲ್ಲಿನ ಎಡವಟ್ಟು ಕಾರಣ ಮತದಾನ ಸ್ಥಗಿತಗೊಂಡಿದೆ. ಅಂತಹ ಎಡವಟ್ಟು ಗುಂಡ್ಲುಪೇಟೆ ತಾಲೂಕಿನಲ್ಲೂ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ ಶಶಿಕುಮಾರ್ ಎಂಬ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳು 9ನೇ ಕ್ರಮ ಸಂಖ್ಯೆ ನೀಡಿದ್ದರು. ಅದರಂತೆ ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ್ದ ಅಭ್ಯರ್ಥಿಗೆ ಮತಗಟ್ಟೆಗೆ ಆಗಮಿಸಿದಾಗ ಶಾಕ್ ಕಾದಿತ್ತು.
ಮತಪತ್ರದಲ್ಲಿ ಶಶಿಕುಮಾರ್ಗೆ 8ನೇ ಕ್ರಮ ಸಂಖ್ಯೆ ನೀಡಲಾಗಿತ್ತು. ಈ ಬಗ್ಗೆ ಅಭ್ಯರ್ಥಿ ಶಶಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ನನ್ನ ಪರ ಮತ ಚಲಾವಣೆ ಮಾಡುವ ಮತದಾರರಿಗೆ ಗೊಂದಲ ಉಂಟಾಗುತ್ತಿದೆ. ಆದ್ದರಿಂಧ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿ ಚುನಾವಣಾ ಅಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಿದರು. ಆದರೆ, ಮನವಿ ತಿರಸ್ಕೃತವಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..