ಗ್ರಾಮಾಯಣ: ಕಂಬೀಪುರ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದೇಕೆ?

Kolara Kambipura villegers protest
Published on

ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಪ್ರಗತಿಯಲ್ಲಿದೆ. ಆದರೆ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯ ಕಂಬೀಪುರ ಗ್ರಾಮಸ್ಥರು ಇಂದು ದಿಢೀರ್ ಮತದಾನ ಬಹಿಷ್ಕರಿಸಿದ್ದಾರೆ.

ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಗ್ರಾಮಕ್ಕೆ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಮುಖ್ಯ ರಸ್ತೆ ಇಲ್ಲವೇ ಇಲ್ಲ. ಇತರೆ ಮೂಲ ಸೌಕರ್ಯಗಳ ಕೊರತೆಯೂ ಇದೆ. ಪ್ರತಿ ಸಲದ ಚುನಾವಣೆಯಲ್ಲೂ ಮೂಲಸೌಕರ್ಯ ಒದಗಿಸುವ ಆಶ್ವಾಸನೆ ಸಿಗುತ್ತದೆಯೇ ಹೊರತು ಕೆಲಸ ಆಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಜಿಲ್ಲಾಧಿಕಾರಿ ಗ್ರಾಮಕ್ಕೆ ಆಗಮಿಸಿ, ರಸ್ತೆ ಸಂಪರ್ಕ ಸೇರಿ ಮೂಲಸೌಕರ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರಷ್ಟೇ ಮತದಾನ ಮಾಡುತ್ತೇವೆ. ಇಲ್ಲವೆಂದರೆ ಮತದಾನ ಮಾಡುವುದಿಲ್ಲ ಎಂದು ಬ್ಯಾನರ್ ಹಿಡಿದು ಧರಣಿ ನಡೆಸಿದ್ದಾರೆ ಗ್ರಾಮಸ್ಥರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net