ನಾವು ಮನರಂಜನೆ ನೀಡುವ ವ್ಯಕ್ತಿಗಳಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಡಿಸಿಎಂ ಪ್ರತಿಕ್ರಿಯೆ​

Parameshwar
Published on

ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಧಿಕೃತ ಚರ್ಚೆ ನಡೆದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

ತುಮಕೂರು ತಾಲೂಕು ಹೆಗ್ಗೆರೆಯಲ್ಲಿ ಮತದಾನ ಮಾಡಿ ಮತನಾಡಿದ ಅವರು, ಶ್ರೀನಿವಾಸ್ ಸೇರ್ಪಡೆಗೆ ಒಲವು ತೋರಿದರೆ ನಮ್ಮ‌ ಹೈಕಮಾಂಡ್ ನಿರ್ಧರಿಸಲಿದೆ ಎಂದರು. ನಮ್ಮ ಅಭಿಪ್ರಾಯ ಕೇಳಿದರೆ ನಮ್ಮ‌ ಜಿಲ್ಲೆಯ ಹಿತದೃಷ್ಟಿಯಿಂದ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ವಿಲೀನದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ, ಈ ಬಗ್ಗೆ ಜೆಡಿಎಸ್ ಮುಖಂಡರೇ ಹೇಳಬೇಕು. ರಾಜಕಾರಣದಲ್ಲಿ ಒಂದು ಹಂತದಲ್ಲಿದ್ದೇವೆ. ನಾವು ಮಾತನಾಡುವಾಗ ಸಂಯಮ, ಎಚ್ಚರಿಕೆಯಿಂದ ಮಾತನಾಡಬೇಕು. ನಾವು ಮನರಂಜನೆ ನೀಡುವ ವ್ಯಕ್ತಿಗಳಲ್ಲ ಎಂದು ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಲೋಕಾಭಿರಾಮವಾಗಿ ಮಾತನಾಡಿದ ಮಾತನ್ನು ರಾಜ್ಯಾದ್ಯಂತ ಚರ್ಚಿಸುವ ಅಗತ್ಯವಿಲ್ಲ, ಒಬ್ಬ ಅಭ್ಯರ್ಥಿಯನ್ನು ಯಾರೊ ಒಬ್ಬರು ಸೋಲಿಸಲು ಅಥವಾ ಗೆಲ್ಲಿಸಲು ಸಾಧ್ಯವಿಲ್ಲ ಎಂದರು. ನಾನು 2013ರ ಚುನಾವಣೆಯಲ್ಲಿ ಸೋತ ವಿಷಯವನ್ನು ನಾನು ಮತ್ತೆ ಗೆದ್ದು ಶಾಸಕನಾದರೂ ಬಿಟ್ಟಿಲ್ಲ ಎಂದು ಇದರಲ್ಲಿ ರಾಜಕೀಯ ಹೊರತಾಗಿ ಮತೇನು ಇಲ್ಲ ಎಂದು ಪ್ರತಿಕ್ರಿಯಿಸಿದರು.

ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ‌ ಮುಳಗಡೆಯಾಗುವ ಹಳ್ಳಿಗಳ ನಿರಾಶ್ರಿತರ ಪುನರ್ವಸತಿ ಕಲ್ಪಿಸುವವರೆಗೂ ಯೋಜನೆಗೆ ತೊಡಕು ಮುಂದುವರಿಯಲಿದೆ ಈ ಬಗ್ಗೆ ಸರ್ಕಾರ ಕೂಡಲೇ ಗಮನ‌ಹರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net