

ಕೊಡಗು: ವಲಸೆ ಕಾರ್ಮಿಕರನ್ನು ಕದ್ದುಮುಚ್ಚಿ ಕೇರಳಕ್ಕೆ ಕಳಿಸುತ್ತಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿ ಕೇರಳದ ಕಾರ್ಮಿಕರಾದ ಮಟ್ಟನೈಲ್ ಅನುಪ್, ಸತ್ಯ ಎಂಬುವರನ್ನು ವಿರಾಜಪೇಟೆಯಲ್ಲಿರುವ ಕುಟ್ಟ ಹಳೇ ಚೆಕ್ಪೋಸ್ಟ್ ಮೂಲಕ ಅವರ ಊರಿಗೆ ಕಳಿಸಿಕೊಡಲು ಕೆ.ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕಷ ಸಿ.ಡಿ.ಬೋಪಣ್ಣ ಪ್ರಯತ್ನ ಮಾಡುತ್ತಿದ್ದರು.
ಇದನ್ನೂ ಓದಿ: ಮತ್ತೊಮ್ಮೆ ಗುಂಪು ಘರ್ಷಣೆ ನಡೆಯಬಾರದು
ಈ ವೇಳೆ ಮೂರು ಜನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಮೂವರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)