More

    ಏಕನಾಥ್​ ಸಿಂಧೆ ಬಣಕ್ಕೆ ಸುಪ್ರೀಂಕೋರ್ಟ್​ನಿಂದ ಬಿಗ್​ ರಿಲೀಫ್​: ಉದ್ಧವ್​ ಠಾಕ್ರೆ ಬಣಕ್ಕೆ ನೈತಿಕ ಗೆಲುವು

    ನವದೆಹಲಿ: ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ 34 ಶಾಸಕರ ಮನವಿಯ ಆಧಾರದ ಮೇಲೆ ವಿಶ್ವಾಸಮತ ಪರೀಕ್ಷೆಗೆ ಅವಕಾಶ ನೀಡಿದ ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರವು ತಪ್ಪು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

    ಮಹಾವಿಕಾಸ ಅಘಾಡಿ ಸರ್ಕಾರದ ವಿರುದ್ಧ ದಂಗೆ ಎದ್ದು ಶಿವಸೇನೆಯಿಂದ ಹೊರ ಹೋಗಿರುವ 16 ಮಂದಿ ಶಾಸಕರು ಬಿಜೆಪಿಗೆ ಬೆಂಬಲ ನೀಡಿ, ಸರ್ಕಾರ ರಚನೆ ಮಾಡಿದ್ದಾರೆ. ಹೀಗಾಗಿ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕು ಮತ್ತು ಸರ್ಕಾರ ಮರುಸ್ಥಾಪನೆಗೆ ಅವಕಾಶ ನೀಡಬೇಕೆಂದು ಕೋರಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು.

    ಇದನ್ನೂ ಓದಿ: ಗಮನ ಸೆಳೆದ ಸಖಿ, ಗ್ರಾಮೀಣ ಸೊಗಡಿನ ಮತಗಟ್ಟೆಗಳು: ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡ ಅಧಿಕಾರಿ, ಸಿಬ್ಬಂದಿ

    ಇಂದು ತೀರ್ಪು ಪ್ರಕಟಿಸಿ ನ್ಯಾಯಾಲಯ ಅಂದಿನ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ಕೊಶ್ಯಾರಿ ಅವರ ಗ್ರಹಿಕೆ ತಪ್ಪು ಎಂದ ಹೇಳಿರುವುದು ಠಾಕ್ರೆ ಬಣಕ್ಕೆ ನೈತಿಕ ಗೆಲುವು ದೊರಕಿದಂತಾಗಿದೆ.

    ವಿಶ್ವಾಸಮತವನ್ನು ಸಾಬೀತು ಪಡಿಸಲು ಮುಂದಾಗದೇ ಏಕಾಏಕಿ ರಾಜೀನಾಮೆ ನೀಡಿರುವುದರಿಂದ ಸರ್ಕಾರ ಮರುಸ್ಥಾಪನೆ ಮಾಡಲಾಗದು ಎಂದು ಕೋರ್ಟ್​ ಹೇಳಿರುವು ಶಿಂಧೆ ಸರ್ಕಾರಕ್ಕೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.

    ಏಕನಾಥ ಶಿಂಧೆ ಬಣದ ವಿಪ್‌ ನೇಮಕವನ್ನು ಸ್ಪೀಕರ್‌ ಮಾಡಿರುವುದು ಕೂಡ ತಪ್ಪು. ವಿಪ್‌ ನೇಮಕದ ಅಧಿಕಾರ ರಾಜಕೀಯ ಪಕ್ಷದ್ದಾಗಿದೆ ಎಂದಿರುವ ಉನ್ನತ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಸಿದೆ. (ಏಜೆನ್ಸೀಸ್​)

    ಕರ್ನಾಟಕದ ಸಾವಿತ್ರಿ ಬಾಯಿ ಫುಲೆ, ಅಕ್ಷರ ದಾಸೋಹಿ ಪುಟ್ಟಮ್ಮಜ್ಜಿ ಇನ್ನಿಲ್ಲ…

    ‘ದಿ ಕೇರಳ ಸ್ಟೋರಿ’ ಸಿನಿಮಾ ಟಿಕೆಟ್​​ ತೋರಿಸಿದರೆ ಚಹಾ, ಕಾಫಿ ಉಚಿತ!

    ಆಪರೇಷನ್ ಕಮಲ ಪ್ರಮೇಯವೇ ಉದ್ಭವಿಸದು; ಶೋಭಾ‌ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts