More

    ಗಮನ ಸೆಳೆದ ಸಖಿ, ಗ್ರಾಮೀಣ ಸೊಗಡಿನ ಮತಗಟ್ಟೆಗಳು: ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡ ಅಧಿಕಾರಿ, ಸಿಬ್ಬಂದಿ

    ಮಂಡ್ಯ: ಕಳೆದ ಚುನಾವಣೆ ವೇಳೆ ‘ಸಖಿ’ ಪಿಂಕ್ ಮತಗಟ್ಟೆಗಳನ್ನು ಕಂಡಿದ್ದ ಜನರನ್ನು ಈ ಬಾರಿಯ ಚುನಾವಣೆಯಲ್ಲಿ ಎಥಿನಿಕ್ ಮತಗಟ್ಟೆ, ಯಂಗ್ ಎಂಪ್ಲಾಯಿ ಮ್ಯಾನೇಜ್‌ಮೆಂಟ್ ಬೂತ್, ಅಂಗವಿಕಲರ ಮತಗಟ್ಟೆಗಳು ಆಕರ್ಷಿಸಿದವು.
    ಜಿಲ್ಲೆಯ ಒಟ್ಟು 1798 ಮತಗಟ್ಟೆಗಳ ಪೈಕಿ 14 ಪಿಂಕ್ ಮತಗಟ್ಟೆಗಳು, 7 ಅಂಗವಿಕಲರ ಮತಗಟ್ಟೆಗಳು, 35 ಎಥಿನಿಕ್ ಮತಗಟ್ಟೆಗಳು, 14 ಯಂಗ್ ಎಂಪ್ಲಾಯಿ ಮ್ಯಾನೇಜ್‌ಮೆಂಟ್ ಬೂತ್‌ಗಳನ್ನು ತೆರೆಯಲಾಗಿತ್ತು. ಇವಿಷ್ಟು ಮತಗಟ್ಟೆಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
    ಪಿಂಕ್ ಮತಗಟ್ಟೆಗಳನ್ನು ಗುಲಾಬಿ ಬಣ್ಣದಿಂದ ಮತಗಟ್ಟೆಯ ಗೋಡೆಗಳನ್ನು ಅಲಂಕರಿಸಲಾಗಿತ್ತು. ಮುಖ್ಯ ದ್ವಾರದ ಬಳಿ ಕಮಾನು ರೀತಿಯಲ್ಲಿ ಅಳವಡಿಸಿದ್ದ ಪಿಂಕ್ ಬಣ್ಣದ ಬಲೂನುಗಳು ಮತದಾರರನ್ನು ಸ್ವಾಗತ ಕೋರಿದವು. ಆ ಮತಗಟ್ಟೆಗಳ ಮಹಿಳಾ ಸಿಬ್ಬಂದಿ ಕೂಡ ಪಿಂಕ್ ಬಣ್ಣದ ವಸ್ತ್ರ ಧರಿಸಿ ಗಮನ ಸೆಳೆದರು. ಮತ ಚಲಾಯಿಸಿ ಹೊರ ಬಂದ ಮಹಿಳೆಯರಿಗೆ ಗುಲಾಬಿ ಹೂವು ನೀಡಲಾಗುತ್ತಿತ್ತು.
    ಹಾಗೆಯೇ ಎಥಿನಿಕ್ ಮತಗಟ್ಟೆಗಳು, ಯುವ ಮತಗಟ್ಟೆಗಳನ್ನು ತೆಂಗಿನ ಗರಿಗಳ ಚಪ್ಪರ, ಕತ್ತಿಮರದ ಹೂವು, ಬಲೂನುಗಳು, ಹೊಂಗೆ ಸೊಪ್ಪಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಕೂಡ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆ-ಕುಪ್ಪಸ, ಶರ್ಟ್-ಪಂಚೆ, ಜುಬ್ಬಾ ಧರಿಸಿ ವಿಶೇಷ ಅಲಂಕಾರದೊಂದಿಗೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದರು.
    ಮತಗಟ್ಟೆಗಳ ಗೋಡೆಗಳನ್ನು ರೇಖಾಚಿತ್ರ, ವರ್ಲಿ ಚಿತ್ರಕಲೆಗಳಿಂದ ಅಲಂಕಾರ ಮಾಡಲಾಗಿತ್ತು. ಹತ್ತಾರು ಮಾದರಿಯ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿತ್ತು. ಮತಗಟ್ಟೆ ಕೊಠಡಿಗಳ ಬಾಗಿಲಿನ ಸುತ್ತಲೂ ವಿಶೇಷವಾಗಿ ಬಣ್ಣದ ಚಿತ್ತಾರ ಮೂಡಿಸಲಾಗಿತ್ತು. ಇವೆಲ್ಲವೂ ಮತಗಟ್ಟೆಗೆ ಬಂದ ಮತದಾರರ ಮನಸ್ಸಿಗೆ ಮುದ ನೀಡಿದವು. ಜಿಲ್ಲೆಯ 7 ಸ್ಥಳಗಳಲ್ಲಿ ಸ್ಥಾಪಿಸಲಾಗಿದ್ದ ಅಂಗವಿಕಲರ ಮತಗಟ್ಟೆಗಳು ಸಹ ಗಮನ ಸೆಳೆದವು. ಇಡೀ ಮತಗಟ್ಟೆಗಳಲ್ಲಿ ಅಂಗವಿಕಲ ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು. ತಾವೂ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಅಚ್ಚುಕಟ್ಟಾಗಿ ಕರ್ತವ್ಯ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts