More

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    ಕೇರಳ: ಕರೊನಾ-ಲಾಕ್​ಡೌನ್ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಇರುವುದನ್ನೆಲ್ಲ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇನ್ನೊಂದಷ್ಟು ಮಂದಿ ಅಂಥ ಸಂಕಷ್ಟದಲ್ಲಿ ಇರದಿದ್ದರೂ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ 70 ಲಕ್ಷ ರೂಪಾಯಿ ಲಾಟರಿ ಹೊಡೆದರೆ ಹೇಗಿರಬಹುದು!

    ಇಂಥ ಟೈಮ್​ನಲ್ಲೂ ಅಷ್ಟೊಂದು ಹಣನಾ ಎಂದು ಮೂಗು ಮುರಿಯುವ ಹಾಗಿಲ್ಲ. ಏಕೆಂದರೆ ಇದು ಕನಸಲ್ಲ, ನಿಜವಾಗಿಯೂ ಒಬ್ಬರಿಗೆ ಲಾಟರಿಯ ಬಂಪರ್ ಪ್ರೈಜ್​ ಬಹುಮಾನವಾಗಿ 70 ಲಕ್ಷ ರೂಪಾಯಿ ಸಿಗಲಿದೆ. ಈ ಬಗ್ಗೆ ಕೇರಳ ಸರ್ಕಾರ ಇಂದು ಮಧ್ಯಾಹ್ನವೇ ಘೋಷಿಸಿದೆ.

    ಇದನ್ನೂ ಓದಿ: ‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಲಾಟರಿ ಡ್ರಾ ಸ್ಥಗಿತಗೊಳಿಸಿದ್ದ ಕೇರಳದ ಲಾಟರಿ ಇಲಾಖೆ ಇಂದು ಕೇರಳ ಸರ್ಕಾರದ ಅಕ್ಷಯ ಎಕೆ-496 ಲಾಟರಿಯನ್ನು ಎತ್ತಿದೆ. ಇದರಲ್ಲಿ ಬಂಪರ್ ಪ್ರೈಜ್​​ ಆಗಿ 70 ಲಕ್ಷ ರೂಪಾಯಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ 10 ಲಕ್ಷ ರೂಪಾಯಿ ಸಿಗಲಿದೆ. ಅಕ್ಷಯ ಎಕೆ-496 ಲಾಟರಿ ಟಿಕೆಟ್ ಸಂಖ್ಯೆ ಎಯು-258505ಕ್ಕೆ ಬಂಪರ್ ಪ್ರೈಜ್​ ಬಂದಿದ್ದರೆ, ಇನ್ನೊಂದು ಟಿಕೆಟ್​ಗೆ ದ್ವಿತೀಯ ಬಹುಮಾನ ಲಭಿಸಿದೆ. ಇನ್ನು 12 ಟಿಕೆಟ್​ಗಳು ಮೂರನೇ ಬಹುಮಾನಕ್ಕೆ ಆಯ್ಕೆ ಆಗಿವೆ.

    ಇದನ್ನೂ ಓದಿ: ನೀವೂ ಕಣ್ತುಂಬಿಸಿಕೊಳ್ಳಬಹುದು ಸರ್ಜಾ ಕುಟುಂಬ ನಿರ್ಮಿಸಿರುವ ಆಂಜನೇಯ ದೇವಸ್ಥಾನದ ಕುಂಭಾಭಿಷೇಕ..

    ಕೇರಳದಲ್ಲಿ 1967ರಲ್ಲೇ ಲಾಟರಿ ಇಲಾಖೆ ಸ್ಥಾಪನೆಗೊಂಡಿದ್ದು, ಇದು ರಾಜ್ಯದ ಪ್ರಮುಖ ಆದಾಯ ಮೂಲವಾಗಿದೆ. ಪ್ರತಿದಿನವೂ ಇಲ್ಲಿ ಲಾಟರಿ ಡ್ರಾ ಇದ್ದು, ನಿತ್ಯ 2 ಲಕ್ಷ ಮಂದಿ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೇರಳದಲ್ಲಿ ವರ್ಷಕ್ಕೆ ಲಾಟರಿಯೊಂದರಿಂದಲೇ 10 ಸಾವಿರದಿಂದ 12 ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳು ಲಾಟರಿಯನ್ನು ಸ್ಥಗಿತಗೊಳಿಸಲಾಗಿತ್ತು. (ಏಜೆನ್ಸೀಸ್​)

    ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

    ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

    ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts