ಸರ್ಕಾರಿ ಅಧಿಕಾರಿಗಳೇ... ‘ಉಗಿಯುವ’ ಮುನ್ನ ಆಲೋಚಿಸಿ!

spitting
Published on

ನವದೆಹಲಿ: ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ, ಪಾನ್​ ಜಿಗಿದು ಉಗುಳುವ ಹವ್ಯಾಸ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿ ಉಗಿಯುವ ಮುನ್ನ ಮತ್ತೊಮ್ಮೆ ಆಲೋಚಿಸುವುದು ಒಳಿತು. ಇಲ್ಲವಾದಲ್ಲಿ, ಕಚೇರಿಯ ಮುಖ್ಯಸ್ಥರು ನಿಮಗೆ ದಂಡ ವಿಧಿಸುತ್ತಾರೆ.

ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ ಇಂಥ ಒಂದು ಆದೇಶ ಹೊರಡಿಸಿದೆ. ಕೋವಿಡ್​ 19 ಪರಿಸ್ಥಿತಿ ನಿರ್ವಹಣೆ ನಿಮಿತ್ತ ಸಚಿವಾಲಯ ದೇಶಾದ್ಯಂತ ಇರುವ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅನ್ವಯವಾಗುವಂತೆ ಈ ಆದೇಶ ಜಾರಿ ಮಾಡಿದೆ.

ಹೆಚ್ಚು ಜನ ಹಾಗೂ ಅಧಿಕಾರಿಗಳು ಓಡಾಡದ ಪ್ರದೇಶದ ಮೂಲೆಯಲ್ಲಿ ಗುಟ್ಕಾ, ಪಾನ್​ ತಿಂದು ಉಗಿದ ಕಲೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಹಾಗೆ ಉಗಿದವರನ್ನು ಗುರುತಿಸಿ, ದಂಡ ವಿಧಿಸುವುದು ಆಯಾ ಕಚೇರಿಯ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಸ್ಥಳೀಯ ಆಡಳಿತದ ನಿಯಮಗಳಿಗೆ ಅನುಸಾರವಾಗಿ ಈ ನಿಯಮವನ್ನು ರೂಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net