ನಾಡಿದ್ದು ನಾಡಿನಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆ; ಸರ್ಕಾರದಿಂದ ಆದೇಶ ಪ್ರಕಟ..

Onake Obavva
Published on

ಬೆಂಗಳೂರು: ರಾಜ್ಯದಲ್ಲಿ ನಾಡು-ನುಡಿ, ಸಂಸ್ಕೃತಿ ಮುಂತಾದವುಗಳಿಗೆ ಅಪಾರ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆ ಪ್ರಯುಕ್ತ ನಾನಾ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಆ ಪಟ್ಟಿಗೆ ಮತ್ತೊಂದು ಜಯಂತಿಯೂ ಸೇರ್ಪಡೆಗೊಂಡಿದೆ.

ನಾಡಿನ ವೀರ ಮಹಿಳೆ ಚಿತ್ರದುರ್ಗದ ಓಬವ್ವ ಅವರ ಜನ್ಮದಿನದ ಗೌರವಾರ್ಥ ನ. 11ನೇ ತಾರೀಕನ್ನು ಒನಕೆ ಓಬವ್ವ ಜಯಂತಿ ಎಂದು ಘೋಷಣೆ ಮಾಡಿರುವ ಸರ್ಕಾರ, ನಾಡಿದ್ದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿಯನ್ನು ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖೇನ ಆದೇಶ ಹೊರಡಿಸಿದೆ.

ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ದಾಳಿ ನಡೆಸಿದ್ದಾಗ ಓಬವ್ವ, ಒನಕೆಯೊಂದನ್ನೇ ಅಸ್ತ್ರವಾಗಿಟ್ಟುಕೊಂಡು ಶತ್ರುಗಳ ಸದೆಬಡಿದು ಹಿಮ್ಮೆಟ್ಟಿಸಿದ್ದರು. ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ನುಗ್ಗುತ್ತಿದ್ದ ಶತ್ರುಗಳನ್ನು ಏಕಾಂಗಿಯಾಗಿ ಒಬ್ಬೊಬ್ಬರನ್ನೇ ಕೊಂದು ಹಾಕಿದ್ದರು. ಆದರೆ ಕೊನೆಗೆ ಹಿಂದಿನಿಂದ ಬಂದು ದಾಳಿ ನಡೆಸಿದ ಶತ್ರುವೊಬ್ಬನಿಗೆ ಬಲಿಯಾಗಿದ್ದರು. ಒನಕೆ ಓಬವ್ವ ಅವರನ್ನು ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕ ಅವರ ಸಾಲಿನಲ್ಲಿ ಪರಿಗಣಿಸಿರುವ ಸರ್ಕಾರ ಇದೀಗ ಜಯಂತಿಯನ್ನೂ ಆಚರಿಸಲು ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net