More

    ಡಿಸೆಂಬರ್​ನಿಂದ ಲಕ್ಷಾಂತರ ಜಿ-ಮೇಲ್​ ಖಾತೆ ಡಿಲೀಟ್​ಗೆ ಮುಂದಾದ ಗೂಗಲ್​- ಕಾರಣ ಇಲ್ಲಿದೆ…

    ನವದೆಹಲಿ: ಎರಡು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ತಮ್ಮ ಜಿ.ಮೇಲ್​ ಖಾತೆ ಬಳಸದಿದ್ದರೆ ಗೂಗಲ್ ಮುಂದಿನ ತಿಂಗಳು ಖಾತೆಗಳನ್ನು ಅಳಿಸಿಹಾಕುತ್ತದೆ. ವೈಯಕ್ತಿಕ ಖಾತೆಗಳಿಗೆ ಮಾತ್ರ ಈ ನೀತಿ ಅನ್ವಯಿಸುತ್ತದೆ.

    ಇದನ್ನೂ ಓದಿ: ‘ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’: ಪಂಜಾಬ್, ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ತರಾಟೆ
    ಇದೇ ಡಿಸೆಂಬರ್ ಗೆ ಎರಡು ವರ್ಷ ಹಿಂದಿನಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಸ್ಥಗಿತಗೊಳಿಸಲು ಗೂಗಲ್​ ಮುಂದಾಗಿದೆ. ಇದರ ಭಾಗವಾಗಿ ಲಕ್ಷಾಂತರ ಜಿ-ಮೇಲ್​ ಖಾತೆಗಳನ್ನು ಅಳಿಸುವ ಅಪಾಯವಿದೆ. ಮೇ ತಿಂಗಳಲ್ಲಿ ಗೂಗಲ್​ ನಿರ್ವಹಣೆಯ ಉಪಾಧ್ಯಕ್ಷ ರುತ್ ಕ್ರಿಚೆಲಿ ಬರೆದ ಬ್ಲಾಗ್ ಪೋಸ್ಟ್‌ನಲ್ಲಿ, ಕಂಪನಿಯು ಅಪಾಯವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ನಿಷ್ಕ್ರಿಯ ನೀತಿ ತರಲಾಗಿದೆ. ಡಿಸೆಂಬರ್‌ ಗೆ ಕನಿಷ್ಠ 2 ವರ್ಷಗಳವರೆಗೆ ಖಾತೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ (ಜಿ-ಮೇಲ್​, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್) ಮತ್ತು ಗೂಗಲ್​ ಫೋಟೋಗಳಲ್ಲಿನ ವಿಷಯ ಸೇರಿ ಖಾತೆ ಮತ್ತು ಅದರ ವಿಷಯಗಳನ್ನು ನಾವು ಅಳಿಸಬಹುದು ಎಂದು ವಿವರಿಸಿದ್ದಾರೆ.

    “ಮರೆತುಹೋದ ಅಥವಾ ಗಮನಿಸದ ಖಾತೆಗಳು ಹಳೆಯ ಅಥವಾ ಮರು ಬಳಸಿದ ಪಾಸ್‌ವರ್ಡ್‌ಗಳನ್ನು ಅವಲಂಬಿಸಿರುತ್ತವೆ. ಅವು ರಾಜಿ ಮಾಡಿಕೊಂಡಿರಬಹುದು, ಎರಡು ಅಂಶಗಳ ದೃಢೀಕರಣವನ್ನು ಹೊಂದಿಸಿಲ್ಲ ಮತ್ತು ಬಳಕೆದಾರರಿಂದ ಕಡಿಮೆ ಭದ್ರತಾ ಪರಿಶೀಲನೆಗಳನ್ನು ಸ್ವೀಕರಿಸುತ್ತವೆ” ಎಂದು ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

    ಯಾರಿಗೆ ಅಪಾಯ?: ಎರಡು ವರ್ಷ ತಮ್ಮ ಜಿ-ಮೇಲ್​ ಖಾತೆಯನ್ನು ತೆರೆಯದಿರುವ ವೈಯಕ್ತಿಕ ಖಾತೆಗಳಿಗೆ ಮಾತ್ರ ನೀತಿಯು ಅನ್ವಯಿಸುತ್ತದೆ. ಶಾಲೆಗಳು ಅಥವಾ ವ್ಯಾಪಾರದಂತಹ ಸಂಸ್ಥೆಗಳ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ.

    ಖಾತೆಯನ್ನು ಸಕ್ರಿಯವಾಗಿರಿಸುವುದು ಹೇಗೆ?:
    ಗೂಗಲ್ ಬ್ಲಾಗ್ ಪೋಸ್ಟ್ ಪ್ರಕಾರ, ಗೂಗಲ್ ಖಾತೆಯನ್ನು ಸಕ್ರಿಯವಾಗಿಡಲು ಸರಳವಾದ ಮಾರ್ಗವೆಂದರೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಸೈನ್ ಇನ್ ಮಾಡುವುದು. ನೀವು ಇತ್ತೀಚೆಗೆ ನಿಮ್ಮ ಖಾತೆಗೆ ಅಥವಾ ನಮ್ಮ ಯಾವುದೇ ಸೇವೆಗಳಿಗೆ ಸೈನ್ ಇನ್ ಮಾಡಿದ್ದರೆ, ನಿಮ್ಮ ಖಾತೆಯನ್ನು ಸಕ್ರಿಯವೆಂದು ಪರಿಗಣಿಸಿ ಅಳಿಸಲಾಗುವುದಿಲ್ಲ.

    ಅದು ಹೇಗೆಂದರೆ ಇಮೇಲ್ ಓದುವುದು ಅಥವಾ ಕಳುಹಿಸುವುದು, ಡ್ರೈವ್ ಬಳಸುವುದು, ಯೂ ಟೂಬ್​ ವೀಡಿಯೊವನ್ನು ವೀಕ್ಷಿಸುವುದು, ಪ್ಲೇಸ್ಟೋರ್​ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು, ಗೂಗಲ್​ ಹುಡುಕಾಟವನ್ನು ಬಳಸುವುದು, ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಗೂಗಲ್​ ಅನ್ನು ಬಳಸುವುದು. ಗೂಗಲ್​ ಒನ್​, ಸುದ್ದಿ ಪ್ರಕಟಣೆ ಅಥವಾ ಅಪ್ಲಿಕೇಶನ್‌ನಂತಹ ನಿಮ್ಮ ಗೂಗಲ್​ ಖಾತೆಗೆ ಸಕ್ರಿಯ ಚಂದಾದಾರಿಕೆಯನ್ನು ಲಿಂಕ್ ಮಾಡಿದ್ದರೆ, ಈ ಚಟುವಟಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆಗ ನಿಮ್ಮ ಖಾತೆಯು ನಿಷ್ಕ್ರಿಯವಾಗುವುದಿಲ್ಲ. ಇದಲ್ಲದೆ, ಯೂ ಟೂಬ್​ ವೀಡಿಯೊಗಳೊಂದಿಗೆ ಸಂಯೋಜಿತವಾಗಿರುವ ಖಾತೆಗಳನ್ನು ಅಳಿಸುವ ಉದ್ದೇಶ ಸಹ ಗೂಗಲ್​ ಹೊಂದಿಲ್ಲ.

    ದೀಪಾವಳಿಗೆ ಪಟಾಕಿ ಸೇರಿ ಸ್ವದೇಶಿ ಸರಕು ಖರೀದಿ: ಚೀನಾಗೆ ಬರೋಬ್ಬರಿ 50ಸಾವಿರ ಕೋಟಿ ರೂ.ನಷ್ಟ!

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts