More

    ದೀಪಾವಳಿಗೆ ಪಟಾಕಿ ಸೇರಿ ಸ್ವದೇಶಿ ಸರಕು ಖರೀದಿ: ಚೀನಾಗೆ ಬರೋಬ್ಬರಿ 50ಸಾವಿರ ಕೋಟಿ ರೂ.ನಷ್ಟ!

    ನವದೆಹಲಿ: ದೀಪಾವಳಿಗೆ ಪಟಾಕಿ ಸೇರಿದಂತೆ ಅಗ್ಗದ ವಿದೇಶಿ ಉತ್ಪನ್ನ ಬಹಿಷ್ಕರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಚೀನಾದ ಉತ್ಪನ್ನಗಳ ಮಾರಾಟಕ್ಕೆ ಭಾರಿ ಹೊಡೆತ ಬೀಳಲಿದೆ. ಸಿಎಇಟಿ ಪ್ರಕಾರ, ಈ ವರ್ಷ ಚೀನಾದ ರಫ್ತುದಾರರು ಸುಮಾರು 50,000 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಿದೆ.

    ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರಿ ಮಳೆ: ರೈಲುಗಳು ರದ್ದು, ಶಾಲೆಗಳು ಬಂದ್​
    ಚೀನಾದಿಂದ ಪಟಾಕಿ ಮತ್ತು ಇತರ ಹಬ್ಬದ ಉತ್ಪನ್ನಗಳನ್ನು ತರಿಸಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೈಗೊಂಡಿರುವ ಕ್ರಮಗಳು ಭಾರತದ ಕೈಗಾರಿಕೆಗಳಿಗೆ ನೇರ ಪ್ರಯೋಜನ ನೀಡುತ್ತದೆ. ಶುಕ್ರವಾರ ಹೊರಡಿಸಿದ ಹೇಳಿಕೆಯ ಪ್ರಕಾರ, ಹಬ್ಬದ ಸೀಸನ್‌ಗೆ ಮುಂಚಿತವಾಗಿ ರಾಷ್ಟ್ರದಾದ್ಯಂತದ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಾಣಬಹುದಾಗಿದೆ. ಹಿಂದಿನ ವರ್ಷದಂತೆ, ಈ ವರ್ಷವೂ ಸಿಎಐಟಿ ಚೀನೀ ಸರಕುಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದೆ. ಹೀಗಾಗಿ ಭಾರತೀಯ ವ್ಯಾಪಾರಿಗಳಿಂದ ಚೀನಾದ ಸರಕುಗಳ ಆಮದು ನಿಲ್ಲಿಸುವ ವಿಷಯದಲ್ಲಿ ಚೀನಾ ಬರೋಬ್ಬರಿ 50,000 ಕೋಟಿ ರೂ. ವ್ಯಾಪಾರ ನಷ್ಟ ಅನುಭವಿಸಲಿದೆ ಎಂಬುದು ಖಚಿತವಾಗಿದೆ ಎಂದು ಸಿಎಐಟಿ ಶುಕ್ರವಾರ ತಿಳಿಸಿದೆ.
    ಗಮನಾರ್ಹ ಸಂಗತಿಯೆಂದರೆ ಭಾರತೀಯರು ಚೀನಾ ಉತ್ಪನ್ನಗಳನ್ನು ಖರೀದಿಸಲು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಭಾರತೀಯ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

    ಏತನ್ಮಧ್ಯೆ ಬೆಂಗಳೂರು ಸೇರಿದಂತೆ ನವದೆಹಲಿ, ಅಹಮದಾಬಾದ್, ಮುಂಬೈ, ,ನಾಗ್ಪುರ ಜೈಪುರ, ಲಕ್ನೋ, ಚಂಡೀಗಢ, ರಾಯ್‌ಪುರ, ಭುವನೇಶ್ವರ, ಕೋಲ್ಕತ್ತಾ, ರಾಂಚಿ, ಗುವಾಹಟಿ, ಪಾಟ್ನಾ, ಚೆನ್ನೈ, ಹೈದರಾಬಾದ್, ಮಧುರೈ, ಪಾಂಡಿಚೇರಿ, ಭೋಪಾಲ್ ಮತ್ತು ಜಮ್ಮು ಸೇರಿ 20 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ವ್ಯಾಪಾರಿಗಳು ಅಥವಾ ಆಮದುದಾರರು ಚೀನಾದ ರಫ್ತುದಾರರಿಗೆ ದೀಪಾವಳಿ ಸರಕುಗಳು, ಪಟಾಕಿಗಳು ಅಥವಾ ಇತರ ವಸ್ತುಗಳನ್ನು ತರಿಸಿಕೊಳ್ಳಲು ಇಲ್ಲಿಯವರೆಗೆ ಯಾವುದೇ ಆರ್ಡರ್ ಮಾಡಿಲ್ಲ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

    ಪ್ರತಿ ವರ್ಷ ರಾಖಿ ಹಬ್ಬದಿಂದ ಜ.1ರ ಕ್ರೈಸ್ತವರ್ಷಾಚರಣೆವರೆಗೆ ಹಬ್ಬದ ಸೀಸನ್​ನಲ್ಲಿ, ಭಾರತೀಯ ವ್ಯಾಪಾರಿಗಳು ಚೀನಾದಿಂದ ಸುಮಾರು 70,000 ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಈ ವರ್ಷ ಇದೇ ಅವಧಿಯಲ್ಲಿ ಚೀನಾ ದೀಪಾವಳಿಗೆ 5,000 ಕೋಟಿ ರೂ., ಗಣೇಶ ಚತುರ್ಥಿಯಲ್ಲಿ 500 ಕೋಟಿ ರೂ. ರೂ.ನಷ್ಟ ಅನುಭವಿಸಿದೆ.

    ಇದೇ ಟ್ರೆಂಡ್ ಮುಂದುವರಿದರೆ ಭಾರತದ ವ್ಯಾಪಾರಿಗಳು ಮಾತ್ರ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವುದಲ್ಲದೆ ಗ್ರಾಹಕರು ಕೂಡ ಚೀನಾ ತಯಾರಿಸಿದ ವಸ್ತುಗಳನ್ನು ಖರೀದಿಸುವ ಆಸಕ್ತಿ ಕಳೆದುಕೊಳ್ಳಲಿದ್ದಾರೆ.

    ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್ ಚಿತ್ರ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts