More

    ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆ ಪ್ರಗತಿ

    ಹುಬ್ಬಳ್ಳಿ : ನೈಋತ್ಯ ರೈಲ್ವೆಯು ಸರಕು ಮತ್ತು ಪಾರ್ಸೆಲ್ ಸಾರಿಗೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.

    ನೈಋತ್ಯ ರೈಲ್ವೆ 2024ರ ಜನವರಿವರೆಗೆ 40.96 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.76ರಷ್ಟು ಸರಕು ಸಾಗಾಟ ಹೆಚ್ಚಳವಾಗಿದೆ.

    ಜನವರಿ 2024 ರಲಿ 4.82 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದೆ. 2023ರ ಮಾರ್ಚ್ ನಂತರ ಎರಡನೇ ಅತಿ ಹೆಚ್ಚು ಮಾಸಿಕ ಲೋಡ್ ಆಗಿದೆ. 2024ರ ಜನವರಿ 31 ರಂದು 3,431 ವ್ಯಾಗನ್ ಗಳನ್ನು ಲೋಡ್ ಮಾಡುವ ಮೂಲಕ ಹಿಂದಿನ ಅತ್ಯುತ್ತಮ ದಾಖಲೆಯನ್ನು ಮೀರಿ, ಎರಡನೇ ಅತಿ ಹೆಚ್ಚು ಏಕದಿನದ ಲೋಡಿಂಗ್ ಅನ್ನು ಸಾಧಿಸಿದೆ. ಸರಕು ಸಾಗಣೆ ಘಟಕ ಅಂದರೆ ಎನ್.ಟಿ.ಕೆ.ಎಂ (ನೆಟ್ ಟನ್ ಕಿಲೋಮೀಟರ್) ಸಹ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.4ರಷ್ಟು ಅತ್ಯುತ್ತಮ ಬೆಳವಣಿಗೆ ದಾಖಲಿಸಿದೆ.

    ನೈಋತ್ಯ ರೈಲ್ವೆಯು ಆಟೋಮೊಬೈಲ್ ವಲಯದಲ್ಲಿ ಗಮನಾರ್ಹ ತಯಾರಕರಾದ ಟಿವಿಎಸ್, ಕೆಐಎ, ಮಾರುತಿ ಸುಜುಕಿ, ಟಾಟಾ, ಟೊಯೊಟಾ ಕಂಪನಿಗಳಿಗೆ ಆದ್ಯತೆಯ ಸಾರಿಗೆ ಆಯ್ಕೆಯಾಗಿ ಹೊರಹೊಮ್ಮಿದೆ. ಇದೇ ಜನವರಿವರೆಗೆ 558 ಆಟೋಮೊಬೈಲ್ ರೇಕ್ ಗಳನ್ನು ಸಾಗಿಸಿದೆ, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 37.1 ರಷ್ಟು ಹೆಚ್ಚಳವಾಗಿದೆ. ಈ ಜನವರಿಯಲ್ಲಿ 69 ಆಟೋಮೊಬೈಲ್ ರೇಕ್​ಗಳನ್ನು ಲೋಡ್ ಮಾಡುವ ಮೂಲಕ ಒಂದು ತಿಂಗಳಲ್ಲಿ ತನ್ನ ಅತ್ಯುತ್ತಮ ಆಟೋಮೋಬೈಲ್ ಲೋಡ್ ಅನ್ನು ಸಾಧಿಸಿದೆ (ವಿಭಾಗವಾರು: ಬೆಂಗಳೂರು 5 ರೇಕ್ ಗಳು , ಮೈಸೂರು ರೇಕ್ ಗಳು, ಹುಬ್ಬಳ್ಳಿ ರೇಕ್).

    ಕಬ್ಬಿಣದ ಅದಿರು, ಸಿಮೆಂಟ್, ಉಕ್ಕು, ಖನಿಜ ತೈಲ, ರಸಗೊಬ್ಬರ, ಕಲ್ಲಿದ್ದಲು, ಆಹಾರ ಧಾನ್ಯಗಳು, ಕಂಟೇನರ್ ಮತ್ತು ಇತರ ಸರಕುಗಳ ಗಣನೀಯ ಸಾಗಣೆಯನ್ನು ಸಾಧಿಸಿದೆ. ಇದರ ಪರಿಣಾಮವಾಗಿ, ನೈಋತ್ಯ ರೈಲ್ವೆ ಇದೇ ಜನವರಿ ವೇಳೆಗೆ 4,055.32 ಕೋಟಿ ರೂ.ಗಳ ಸರಕು ಆದಾಯವನ್ನು ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ಶೇ 10.36ರಷ್ಟು ಹೆಚ್ಚಳವಾಗಿದೆ.

    ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು, ಅಧಿಕಾರಿಗಳ ಮತ್ತು ಸಿಬ್ಬಂದಿಯ ಪ್ರಯತ್ನಗಳನ್ನು ಅಭಿನಂದಿಸಿದ್ದಾರೆ ಮತ್ತು ರೈಲ್ವೆಯೊಂದಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಕ್ಕಾಗಿ ಸರಕು ಮತ್ತು ಪಾರ್ಸೆಲ್ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts