ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್ ಚಿತ್ರ…!

rrrrrrr
Published on

ಜವಾನ್ ಚಿತ್ರದ ಮೂಲಕ ನಯನತಾರಾ, ವಿಜಯ್ ಸೇತುಪತಿ, ಯೋಗಿ ಬಾಬು ಹೀಗೆ ಅನೇಕ ತಮಿಳು ತಾರೆಯರು ಬಾಲಿವುಡ್‌ ಪ್ರವೇಶಸಿದ್ದರು.. ಹೀಗಾಗಿ ಚಿತ್ರವು ತಮಿಳು ಅಭಿಮಾನಿಗಳಲ್ಲಿಯೂ ಕ್ರೇಜ್​​​ ಹುಟ್ಟಿಸಿತ್ತು.


ಅನಿಮಲ್‌ ಚಿತ್ರ ಡಿಸೆಂಬರ್ 1 ರಂದು ತೆರೆಗೆ ಬರಲಿದೆ. ಈ ಸಿನಿಮಾಗೆ ರಣಬೀರ್ ಕಪೂರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಇದೀಗ ಅಮೆರಿಕವೊಂದರಲ್ಲೇ ಅನಿಮಲ್‌ ಒಟ್ಟು 900 ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಇದಕ್ಕೂ ಮೊದಲು ಜವಾನ್ ಯುಎಸ್ ನಲ್ಲಿ 850 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿ ಅತ್ಯುನ್ನತ ಸಾಧನೆ ಮಾಡಿತ್ತು. ಈಗ ಇದನ್ನು ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರ ರಿಕ್ರಿಯೆಟ್‌ ಮಾಡುವುದರ ಜೊತೆಗೆ ಒಂದು ಹೆಜ್ಜೆ ಮುಂದಿದ್ದಾರೆ.


ರಣಬೀರ್ ಕಪೂರ್ ಮತ್ತು ರಶ್ಮಿಕಾ ಅಭಿನಯದ ಅನಿಮಲ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಅನಿಮಲ್​ ಚಿತ್ರ ರಿಲೀಸ್​​ಗೂ ಮುನ್ನ ಪ್ರೇಕ್ಷಕರಲ್ಲಿ ಕುತೂಹಲವನ್ನ ಹೆಚ್ಚಿಸಿದ್ದು, ಸದ್ಯ ರಣ್​ಬೀರ್​ ಮತ್ತು ರಶ್ಮಿಕಾ ಕೋಡಿ ತೆರೆಯ ಮೇಲೆ ಯಾವ ರೀತಿ ಮೋಡಿ ಮಾಡಿದೆ.


ಜತೆಗೆ ಈ ಜೋಡಿ ಎಷ್ಟರ ಮಟ್ಟಿಗೆ ಜನರ ಪ್ರೀತಿ ಗಳಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net